‘ಜೈಲರ್’ (Jailer) ಸಿನಿಮಾ ಹವಾ ಆಕಾಶಕ್ಕೆ ಮುಟ್ಟಿದೆ. ಬಿಡುಗಡೆಯಾಗಿ ಹನ್ನೆರಡು ದಿನ ಕಳೆದಿವೆ. ಆದರೂ ರಜನಿಯನ್ನು (Rajanikanth) ನೋಡಲು ಜನರು ಮುಗಿಬೀಳುತ್ತಿದ್ದಾರೆ. ವಿಶ್ವಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ. ಆದರೆ ಕರ್ನಾಟಕದಲ್ಲಿ ತಲೈವಾ ಸಿನಿಮಾ ಬಾಚಿದ್ದೆಷ್ಟು? ಎಷ್ಟು ಪ್ರದರ್ಶನಗಳಲ್ಲಿ ಮೆರೆಯುತ್ತಿದೆ ಜೈಲರ್?
ರಜನಿಕಾಂತ್ ಮೇನಿಯಾ ನಿಲ್ಲುತ್ತಿಲ್ಲ. ಒಂದಲ್ಲ ಎರಡಲ್ಲ. ಭರ್ತಿ ಹನ್ನೆರಡು ದಿನ ಮುಗಿದಿದೆ. ಆದರೂ ಜನರು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ. ರಜನಿ ಯುಗ ಮುಗಿಯಿತು ಎಂದವರಿಗೆ ಕಪಾಳಕ್ಕೆ ಬಾರಿಸುವಂಥ ಉತ್ತರ ಕೊಟ್ಟಿದೆ ಜೈಲರ್. ವಿಶ್ವಾದ್ಯಂತ ಇಲ್ಲಿವರೆಗೆ 500 ಕೋಟಿ ರೂ. ಗಳಿಸಿದೆ. ಹಾಗಿದ್ದರೆ ಕರ್ನಾಟಕದಲ್ಲಿ(Karnataka) ಎಷ್ಟು ಕೋಟಿ? ಉಸಿರು ಬಿಗಿ ಹಿಡಿಯಿರಿ. ಅನಾಮತ್ತು ಐವತ್ತು ಕೋಟಿಯನ್ನು ಖಜಾನೆಗೆ ಸೇರಿಸಿದೆ. ದಟ್ ಈಸ್ ತಲೈವಾ ತಾಕತ್ತು. ಇದನ್ನೂ ಓದಿ:ಬಾಲಿವುಡ್ ನಟ ಪಂಕಜ್ ತ್ರಿಪಾಠಿ ತಂದೆ ವಿಧಿವಶ
ಮೊದಲ ದಿನ ಒಟ್ಟು 500 ಪ್ರದರ್ಶನ ಕಂಡಿತ್ತು ಜೈಲರ್. ಮೊದಲ ವಾರದ ನಂತರ ಪ್ರದರ್ಶನ ಸಂಖ್ಯೆ ಕಮ್ಮಿ ಆಗಬಹುದು. ಹೀಗಂತ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಐದು ನೂರರಲ್ಲಿ ಒಂದೇ ಒಂದು ಪ್ರದರ್ಶನ ಕಮ್ಮಿಯಾಗಿಲ್ಲ. ಜನರು ಸಿನಿಮಾ ನೋಡುವುದನ್ನು ನಿಲ್ಲಿಸುತ್ತಿಲ್ಲ. ರಜನಿ ಅಷ್ಟೊಂದು ಮೋಡಿ ಮಾಡಿದ್ದಾರೆ. ಏನಾದರಾಗಲಿ. ಹಳೇ ರಜನಿಕಾಂತ್ ಮತ್ತೆ ಸಿಕ್ಕಿದ್ದಾರೆ. ಫ್ಯಾನ್ಸ್ ಕೇಕೆ ಹಾಕುತ್ತಿದ್ದಾರೆ. ನಿರ್ದೇಶಕ ನೆಲ್ಸನ್ ನಿರ್ದೇಶನಕ್ಕೆ ಭೇಷ್ ಎಂದಿದ್ದಾರೆ.
ಸಿನಿಮಾರಂಗದ ಆರಾಧ್ಯ ದೈವ ರಜನಿಕಾಂತ್ ಅವರನ್ನ ಜೈಲರ್ (Jailer) ಸಿನಿಮಾ ಮೂಲಕ ಮತ್ತೆ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ತಲೈವಾ ಮತ್ತೆ ತೆರೆಯ ಮೇಲೆ ಮಿಂಚೋದಕ್ಕೆ ಸೂಕ್ತ ಸಿನಿಮಾ ಅಂತಿದ್ದಾರೆ. ಈಗ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]