ಚಿತ್ರೋದ್ಯಮ ಕಂಡ ಅದ್ಭುತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್ (RRR) ಸಿನಿಮಾ ಆಸ್ಕರ್ ಪ್ರಶಸ್ತಿ ಬಾಚಿಕೊಂಡಿತ್ತು. 2022ರಲ್ಲಿ ತೆರೆಕಂಡ ಈ ಸಿನಿಮಾಗೆ ಈಗಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಜಿ20 ಶೃಂಗಸಭೆಯಲ್ಲಿ ಬ್ರೆಜಿಲ್ ಅಧ್ಯಕ್ಷ ‘ಆರ್‌ಆರ್‌ಆರ್’ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಈ ಕುರಿತ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Advertisement
ಜಿ20 (G20 Summit) ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆದಿದೆ. ವಿವಿಧ ದೇಶದ ಗಣ್ಯರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ದೆ ಸೆಲ್ವಾ (Luiz Inácio Lula Da Silva) ಕೂಡ ಭಾಗವಹಿಸಿದ್ದರು. ಅವರು ‘ಆರ್‌ಆರ್‌ಆರ್’ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಈ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ.ಇದನ್ನೂ ಓದಿ:ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್
Advertisement
Thank you President of Brezil, @LulaOfficial for your kind words on #RRRMovie.
Our entire team is elated with your applause ❤️. pic.twitter.com/dDpMRtZf23
— RRR Movie (@RRRMovie) September 10, 2023
Advertisement
‘ಆರ್‌ಆರ್‌ಆರ್’ (RRR) ಮೂರು ಗಂಟೆಯ ಫೀಚರ್ ಸಿನಿಮಾ. ಹಲವು ಫನ್ನಿ ದೃಶ್ಯ ಇದೆ. ಅದ್ಭುತ ನೃತ್ಯವಿದೆ. ಬ್ರಿಟಿಷರ ಆಡಳಿತದ ಬಗ್ಗೆ ತೀವ್ರ ಟೀಕೆಯೂ ಇದೆ ಈ ಚಿತ್ರ ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಸಿನಿಮಾ ಆಗಬೇಕು ನನ್ನ ಅಭಿಪ್ರಾಯ. ಭಾರತದ ಬಗ್ಗೆ ಯಾರೇ ಪ್ರಸ್ತಾಪಿಸಿದರೂ ನೀವು ಆರ್‌ಆರ್‌ಆರ್ ಸಿನಿಮಾ ನೋಡಿದ್ದೀರಾ ಎಂದು ಕೇಳುತ್ತಾರೆ. ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ನಾನು ಅಭಿನಂದಿಸುತ್ತೇನೆ. ಈ ಸಿನಿಮಾ ನನ್ನನ್ನು ಮೋಡಿ ಮಾಡಿದೆ ಎಂದಿದ್ದಾರೆ.
Advertisement
‘ಆರ್‌ಆರ್‌ಆರ್’ ಚಿತ್ರಕ್ಕೆ ವಿ.ವಿಜೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ (Rajamouli) ನಿರ್ದೇಶನ ಮಾಡಿದ್ದರು. ಜ್ಯೂ.ಎನ್‌ಟಿಆರ್, ಆಲಿಯಾ ಭಟ್(Aliaa Bhatt), ರಾಮ್ ಚರಣ್(Ram Charan), ಅಜಯ್ ದೇವಗನ್, ಶ್ರೀಯಾ ಶರಣ್ ನಟಿಸಿದ್ದರು.