ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಕುರುಬರಹಳ್ಳಿಯಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋದ ಶಾಂತಕುಮಾರ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಪ್ರಕೃತಿ ವಿಕೋಪದಿಂದ ಈ ರೀತಿಯ ಅನಾಹುತಗಳಾಗುವುದು ಸಹಜ. ಮಳೆ ಬಂದಾಗ ಕೆಲವೊಂದು ಅನಾಹುತಗಳು ಆಗಿಯೇ ಆಗುತ್ತದೆ. ಇದು ಹೊಸದೇನೆಲ್ಲ. ಎಲ್ಲಾ ಕಡೆ ಇಂತಹ ಘಟನೆಗಳು ನಡೆಯುತ್ತವೆ. ರಾಜಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಪತ್ತೆ ಶೋಧ ಕಾರ್ಯ ನಡೆಯುತ್ತಿದೆ. ವ್ಯಕ್ತಿ ಪತ್ತೆಯಾದ ನಂತ್ರ ಪರಿಹಾರದ ಬಗ್ಗೆ ಯೋಚನೆ ಮಾಡುತ್ತೇವೆ ಹಾರಿಕೆಯ ಉತ್ತರ ನೀಡಿದ್ದಾರೆ.
Advertisement
Advertisement
ನಗರದಲ್ಲಿ ಶನಿವಾರ ಸಂಜೆಯಿಂದ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದ್ದು, ಹಲವು ಕಡೆ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕುರುಬರಹಳ್ಳಿಯ ಜೆಸಿ ನಗರದಲ್ಲಿ ಮಳೆರಾಯ ಭಾರೀ ದುರಂತಕ್ಕೆ ಕಾರಣವಾಗಿದ್ದು, ಶಾಂತಕುಮಾರ್ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ.
Advertisement
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅನಾಹುತ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ
Advertisement
ಕಳೆದ 15 ದಿನಗಳಿಂದ ಜೆಸಿ ನಗರದ ಬಳಿ ಹಾದು ಹೋಗಿರುವ ರಾಜಾಕಾಲುವೆಗೆ ತಡೆಗೋಡೆ ನಿರ್ಮಿಸಲಾಗ್ತಿತ್ತು. ನಿನ್ನೆ ರಾತ್ರಿ 8.50ರ ಸುಮಾರಿಗೆ ರಾಜಕಾಲುವೆ ಬಳಿಯೇ ಮಾತಾನಾಡುತ್ತಿದ್ದ ಕುಳಿತಿದ್ದರು. ಈ ವೇಳೆ, ಭಾರಿ ಮಳೆ ಸುರಿದು ಕ್ಷಣಾರ್ಧದಲ್ಲಿ ರಾಜಕಾಲುವೆ ಉಕ್ಕಿ ಹರಿದಿದೆ. ಈ ಸಂದರ್ಭದಲ್ಲಿ ಶಾಂತಕುಮಾರ್ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಆದ್ರೆ ಜೊತೆಗಿದ್ದ ಕ್ಲೀನರ್ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: ಶನಿವಾರದಂತೆ, ಇಂದು ಮತ್ತು ನಾಳೆ ರಾತ್ರಿಯೂ ಬೆಂಗಳೂರಿನಲ್ಲಿ ಸುರಿಯಲಿದೆ ಭಾರೀ ಮಳೆ
ಕೆಜೆ ಜಾರ್ಜ್ ಈ ರೀತಿಯ ಬೇಜವಾವ್ದಾರಿ ಹೇಳಿಕೆ ನೀಡುವುದು ಹೊಸದೆನಲ್ಲ. 2015ರ ಮಡಿವಾಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವ ವೇಳೆ ಇಬ್ಬರು ರೇಪ್ ಮಾಡಿದರೆ ಅದು ಗ್ಯಾಂಗ್ ರೇಪ್ ಹೇಗಾಗುತ್ತೆ? ಮೂರು, ನಾಲ್ಕು ಜನ ಸೇರಿ ಕೃತ್ಯ ಎಸಗಿದರೆ ಗ್ಯಾಂಗ್ ರೇಪ್ ಅಂತ ಹೇಳಬಹುದು ಎಂದು ಹೊಸ ವ್ಯಾಖ್ಯಾನ ಕೊಟ್ಟಿದ್ದರು.
ಇದನ್ನೂ ಓದಿ: ರಣಭೀಕರ ಮಳೆಗೆ ರಾಜಧಾನಿ ಗಢ ಗಢ: ಎಲ್ಲಿ ಏನು ಅನಾಹುತವಾಗಿದೆ?