ಬೆಂಗಳೂರು: ಕುಖ್ಯಾತ ನಟೋರಿಯೆಸ್ ಮನೆಗಳ್ಳನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್(54) ಬಂಧಿತ ಆರೋಪಿ. ಕೋಲಾರ, ಶಿವಮೊಗ್ಗ, ಬಳ್ಳಾರಿಯಲ್ಲಿ ಒಟ್ಟು 3 ಮದುವೆಯಾಗಿರುವ ಈತನಿಗೆ 7 ಮಂದಿ ಮಕ್ಕಳಿದ್ದಾರೆ. ಇದುವರೆಗೂ ಆರೋಪಿ ಮೇಲೆ ಬರೋಬ್ಬರಿ 160ಕ್ಕೂ ಹೆಚ್ಚು ಕಳ್ಳತನ ಮಾಡಿರುವ ಪ್ರಕರಣಗಳು ದಾಖಲಾಗಿದೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ತಂದ ಅವಾಂತರ – ಪ್ರಿಯಕರನನ್ನೇ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ಲು
Advertisement
Advertisement
ರಾಜ್ಯದ ಬೆಂಗಳೂರು, ಕೋಲಾರ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ, ಗುಲ್ಬರ್ಗ ಸೇರಿದಂತೆ ಗೋವಾ ಕೇರಳದಲ್ಲೂ ಪ್ರಕಾಸ್ ತನ್ನ ಕೈಚಳಕ ತೋರಿಸಿದ್ದು, ಇದುವರೆಗೂ ಸುಮಾರು 20ಕ್ಕೂ ಹೆಚ್ಚು ಬಾರಿ ಜೈಲುಸೇರಿ ಹೊರಬಂದಿದ್ದಾನೆ. 1978ರಲ್ಲಿ ಆರೋಪಿ ತನ್ನ ಹತ್ತನೇ ವಯಸ್ಸಿಗೆ ಕಳ್ಳತನಕ್ಕೆ ಇಳಿದಿದ್ದನು. ಆರೋಪಿ ಕೈಚಳಕಕ್ಕೆ ಆತನ ಸಹೋದರ ವರದರಾಜ್, ಮಕ್ಕಳಾದ ಬಾಲರಾಜ್, ಮಿಥುನ್, ಅಳಿಯ ಜಾನ್ ಕೂಡ ಸಾಥ್ ನೀಡಿದ್ದಾರೆ. ಕಳೆದ ಆಗಸ್ಟ್ 22 ರಂದು ರಾಜಾಜಿನಗರದ ಮನೆಕಳ್ಳತನ ಮಾಡಿ ಪ್ರಕಾಶ್ ಸಿಕ್ಕಿಬಿದ್ದಿದ್ದಾನೆ. ನಿಜಕ್ಕೂ ಈತನ ಕ್ರಿಮಿನಲ್ ಹಿಸ್ಟರಿ ಎಲ್ಲರನ್ನೂ ಕೂಡ ಬೆಚ್ಚಿ ಬೀಳಿಸುವಂತಿದೆ.
Advertisement
Advertisement
* 1978-1986 (100 ಮನೆಗಳವು ಪ್ರಕರಣ)
ಕೇರಳದ ಕೊಟ್ಟಾಯಂ ನಲ್ಲಿ 2.5 ಕೆಜಿ ಚಿನ್ನ ಕಳವು, ಶೇಷಾದ್ರಿಪುರಂ ಚಿನ್ನದ ಅಂಗಡಿಯಲ್ಲಿ ಗೋಡೆ ಕೊರೆದು ಎರಡೂವರೆ ಚಿನ್ನ ಕಳವು, ಮಾರ್ಕೆಟ್‍ನ ಸೇಠ್ ಅಂಗಡಿ ಒಡೆದು 4 ಕೆಜಿ ಚಿನ್ನ 20 ಕೆಜಿ ಬೆಳ್ಳಿ ಕಳ್ಳತನ ಮಾಡಿದ್ದಾನೆ. ಪ್ರಕಾಶನ ಕೃತ್ಯಕ್ಕೆ ಆಗಿನ ಸಹಚರರಾದ ಜೋಸೆಫ್, ಅನಂದನ್, ಬಾಷಾ ಸಾಥ್ ನೀಡಿದ್ದರು. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್
* 1989-1990 (ಮೈಸೂರು)
ವೈರ್ ಮುಡಿ ಹಾಗೂ ನಾಗೇಶ್ ಎಂಬ ಸಹಚರರ ಜೊತೆ ಸೇರಿ 1989 ಮೈಸೂರಲ್ಲಿ 20 ಕಡೆ ಮನೆಗಳ್ಳತನ ಮಾಡಿದ್ದ. 1992 ನಾಗೇಶನ ಜೊತೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎರಡು ಚಿನ್ನದ ಅಂಗಡಿ ಒಡೆದು 17 ಕೆಜಿ ಚಿನ್ನಾಭರಣ ಕಳವು ಮಾಡಿದ್ದ. 1992 ರಲ್ಲಿ ಕಂಟ್ ಮಂಡೂರಲ್ಲಿ 7 ಕೆಜಿ ಚಿನ್ನಾಭರಣ ಹಾಗೂ ಶಿವಮೊಗ್ಗದ ಫೈನಾನ್ಸ್ ಕಚೇರಿಯಿಂದ 3 ಕೋಟಿ ನಗದು ಕದ್ದಿದ್ದನು. 1997 ರಲ್ಲಿ ಗೋವಾದಲ್ಲಿ 7 ಕೆಜಿ ಚಿನ್ನಾಭರಣ ಕಳವು ಮಾಡಿದ್ದನು.
2006ರಲ್ಲಿ ಮಕ್ಕಳಾದ ಮಿಥುನ್ ಹಾಗೂ ಬಾಲರಾಜ್ ಜೊತೆ ಕೈಚಳಕ ಆರಂಭಿಸಿದ್ದ. ಅಳಿಯ ಮಕ್ಕಳ ಜೊತೆ ಸೇರಿಕೊಂಡು ಕಳೆದ ಹದಿನಾರು ವರ್ಷಗಳಿಂದ ಕಳ್ಳತನ ಮಾಡಿದ್ದ. ಐಷಾರಾಮಿ ಮನೆಗಳು, ಜ್ಯುವೆಲರಿ ಶಾಪ್, ಫೈನಾನ್ಸ್ ಕಚೇರಿಗಳೇ ಈತನ ಟಾರ್ಗೆಟ್ ಆಗಿರುತ್ತಿತ್ತು. ಪ್ರತಿಬಾರಿ ಜೈಲಿಗೆ ಹೋದಾಗಲೂ ಆರೋಪಿ ಒಂದೊಂದು ಟೀಂ ಕಟ್ಟುತ್ತಿದ್ದನು.