ಬೆಂಗಳೂರು: ರಾಜಹಂಸ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಶೋಗಳು ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಹಲವು ಕಡೆ ಥಿಯೇಟರ್ ಭರ್ತಿಯಾಗುತ್ತಿರುವುದು ಚಿತ್ರ ತಂಡಕ್ಕೆ ಖುಷಿಕೊಟ್ಟಿದೆ.
ಈ ಸಂಬಂಧ ಚಿತ್ರ ತಂಡ ಇಂದು ಬೆಂಗಳೂರಿನ ಮಾಲ್‍ಗಳಿಗೆ ಭೇಟಿ ನೀಡುತ್ತಿದೆ ಎಂದು ಚಿತ್ರ ತಂಡ ಪರವಾಗಿ ನಾಯಕಿ ರಂಜನಿ ಅವರು ಫೇಸ್‍ಬುಕ್ ಲೈವ್ ನಲ್ಲಿ ಹೇಳಿದ್ದಾರೆ.
Advertisement
ಹೊಸಬರಾಗಿ ನಿರ್ಮಿಸಿರುವ ಚಿತ್ರವನ್ನು ಪ್ರೇಕ್ಷಕ ಹೇಗೆ ನೋಡುತ್ತಾನೆ ಎನ್ನುವ ಒಂದು ಹೆದರಿಕೆ ಇತ್ತು. ಆದರೆ ಅಭಿಮಾನಿಗಳು ಮೆಚ್ಚಿರುವುದು ನಮಗೆ ಸಂತೋಷ ನೀಡಿದೆ ಎಂದು ಚಿತ್ರದ ನಾಯಕ ನಟ ಗೌರಿ ಶಿಕರ್ ಹೇಳಿದ್ದಾರೆ.
Advertisement
ಎರಡು ಶೋ ಇರುವಲ್ಲಿ ನಾಲ್ಕು ಶೋ ಆಗುತ್ತಿದೆ. ಒಬ್ಬೊಬ್ಬರೇ ವೀಕ್ಷಿಸುವುದಕ್ಕಿಂತ ಇಡೀ ಕುಟುಂಬವೇ ನೋಡಬಹುದಾದ ಚಿತ್ರ ಇದಾಗಿದ್ದು, ಅಭಿಮಾನಿಗಳು ಇಷ್ಟ ಪಟ್ಟಿದ್ದು, ಇಂದು ನಾವು ಅಭಿಮಾನಿಗಳನ್ನು ಭೇಟಿ ಮಾಡುತ್ತೇವೆ ಎಂದು ರಂಜಿನಿ ಹೇಳಿದ್ದಾರೆ.
Advertisement
ಸಿನಿಮಾದ ಒಳಗಡೆ ನಾಟಕವನ್ನು ತಂದಿದ್ದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ನಾಟಕ ಕುಟುಂಬದಿಂದ ಬಂದ ಹಂಸಳನ್ನು(ರಂಜಿನಿ) ಶ್ರೀಮಂತ ಕುಟುಂಬದಿಂದ ಬಂದ ಶೋಕಿಲಾಲನ ಪಾತ್ರದಲ್ಲಿರುವ ನಾಯಕ ರಾಜ(ಶಿಕರ್) ಪ್ರೀತಿ ಮಾಡಿ ಹೇಗೆ ಮದುವೆಯಾಗುತ್ತಾನೆ? ಆತನ ಕುಟುಂಬ ಏನು ಮಾಡುತ್ತದೆ ಎನ್ನುವುದೇ ಚಿತ್ರದ ಕತೆ.
Advertisement
ಇದನ್ನೂ ಓದಿ: `ರಾಜಹಂಸ’ ಶೂಟಿಂಗ್ ವೇಳೆ ತಪ್ಪಿದ ದೋಣಿ ದುರಂತ
ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಪುಟ್ಟ ಗೌರಿ (ರಂಜಿನಿ ರಾಘವನ್) ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಮಿಂಚಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆದಿದೆ.