ಮಲಯಾಳಂಗೆ ಹಾರಿದ ರಾಜ್ ಬಿ. ಶೆಟ್ಟಿ : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಾಯಕಿ

Public TV
1 Min Read
FotoJet 13

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಚಿತ್ರಕ್ಕೆ ಆಕ್ಷನ್ ಕಟ್ ಜೊತೆಗೆ ನಾಯಕನಾಗಿ ನಟಿಸುತ್ತಿರುವ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಮೂಡಿ ಬರುತ್ತಿರುವುದು ವಿಶೇಷ. ಮೂಲ ಮಲಯಾಳಂನಲ್ಲಿ ತಯಾರಾದರೂ, ಇತರ ಮೂರು ಭಾಷೆಗಳಿಗೆ ಈ ಚಿತ್ರವನ್ನು ಡಬ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಣೆ ಆಗಿದೆ.

FotoJet 2 9

ರಾಜ್ ಬಿ ಶೆಟ್ಟಿ (Raj B Shetty) ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾಗೆ ‘ರುಧಿರಂ’ (Rudhiram) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮೂಲಕ ರಾಜ್ ಬಿ ಶೆಟ್ಟಿ ಅವರು ಮಲಯಾಳಂ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಚಿತ್ರವನ್ನು  ಜಿಶೋ ಲೋನ್ ಆಂಟನಿ (Jisho Lone Antony) ನಿರ್ದೇಶನ ಮಾಡುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣ ಬಾಲಮುರಳಿ (Aparna Bala Murali) ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

FotoJet 1 10

ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ರೆಡಿ ಮಾಡುತ್ತಿದ್ದಾರಂತೆ ನಿರ್ಮಾಪಕರು. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈ ಸಿನಿಮಾ ರೆಡಿ ಆಗುತ್ತಿದ್ದು, ಹಿಂದಿಯಲ್ಲಿ ಮಾಡುವ ಕುರಿತು ಇನ್ನೂ ತೀರ್ಮಾನ ತಗೆದುಕೊಂಡಿಲ್ಲ. ಸದ್ಯಕ್ಕೆ ಚಿತ್ರತಂಡ ಇಷ್ಟು ಮಾಹಿತಿಯನ್ನು ನೀಡಿದ್ದು, ಉಳಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *