BollywoodCinemaLatestMain PostNational

ನಾನು ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡಿಲ್ಲ: ರಾಜ್ ಕುಂದ್ರಾ

Advertisements

– ಕಾಣದ ಕೈಗಳ  ಪಿತೂರಿಗೆ ನಾನು ಬಲಿಯಾಗಿದ್ದೇನೆ
– ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಲಾಗಿದೆ

ಮುಂಬೈ: ನಾನೆಂದೂ ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡಿಲ್ಲ. ನನ್ನ ಕುರಿತು ಆಧಾರವಿಲ್ಲದ ಅನೇಕ ಮಾಹಿತಿ, ಲೇಖನಗಳು ಹರಿದಾಡುತ್ತಿವೆ. ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಲಾಗಿದೆ ಎಂದು ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ರಾಜ್ ಕುಂದ್ರಾ ಅವರು, ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ನಾನು ಸ್ಪಷ್ಟನೆಗಳನ್ನು ನೀಡಲಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅದರಲ್ಲಿ ಸತ್ಯ ಗೆಲ್ಲುತ್ತದೆ. ನಾನು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ ಎಂದು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್ ಈಗ ಉತ್ತರಾಖಂಡ್ ಬ್ರಾಂಡ್ ಅಂಬಾಸಿಡರ್

ನಾನು ಅಶ್ಲೀಲ ಸಿನಿಮಾ ಮಾಡಿಲ್ಲ. ನಾಚಿಕೆಯಿಂದ ಮುಖ ಮುಚ್ಕೊಂಡು ಓಡಾಡುವುದಿಲ್ಲ. ಕಾನೂನಿನ ರೀತಿಯಲ್ಲಿ ವಿಚಾರಣೆ ಎದುರಿಸುತ್ತೇನೆ. ನನ್ನ ವಿರುದ್ಧದ ಇಡೀ ಪ್ರಕರಣ ದೊಡ್ಡ ಪಿತೂರಿಯಾಗಿದ್ದು, ಕಾಣದ ಕೈಗಳ ಆಟವಾಡುತ್ತಿವೆ. ಪಿತೂರಿಗೆ ನಾನು ಬಲಿಯಾಗಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ, ವಿಜಯ್ ದೇವರಕೊಂಡ

ಈಗಾಗಲೇ ಮಾಧ್ಯಮಗಳಿಂದ ತಪ್ಪಿತಸ್ಥನೆಂದು ಘೋಷಿಸಲ್ಪಟ್ಟಿದ್ದೇನೆ. ವಿವಿಧ ಹಂತಗಳಲ್ಲಿ ಮಾನವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿ ನಿರಂತರವಾಗಿ ನನ್ನ ವಿರುದ್ಧ ಸುದ್ದಿ ಮಾಡುವ ಮೂಲಕ ಬಹಳಷ್ಟು ನೋವು ನೀಡಿದ್ದಾರೆ. ಟ್ರೋಲ್‍ಗಳಿಂದ, ನೆಗೆಟಿವ್ ಮಾತುಗಳಿಂದ, ಸಾರ್ವಜನಿಕ ಅಭಿಪ್ರಾಯದಿಂದ ನಮಗೆ ತೊಂದರೆ ಆಗಿದೆ. ನಾನು ಮುಖ ಮುಚ್ಚಿಕೊಂಡು ಓಡಾಡುವುದಿಲ್ಲ. ನನ್ನ ಖಾಸಗಿತನಕ್ಕೆ ಬೆಲೆ ನೀಡಿ ಎಂದು ಬಯಸುತ್ತೇನೆ. ನನ್ನ ಕುಟುಂಬವೇ ನನಗೆ ಮುಖ್ಯ. ಈ ಸಂದರ್ಭದಲ್ಲಿ ಅದಕ್ಕಿಂತ ಬೇರೆ ಏನೂ ನನಗೆ ಮುಖ್ಯವಲ್ಲ. ನಾನು ವಿಚಾರಣೆಯನ್ನು ಎದುರಿಸಲು ಸಿದ್ಧನಿದ್ದೇನೆ ಮತ್ತು ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇನೆ, ಅಲ್ಲಿ ಸತ್ಯವು ಮೇಲುಗೈ ಸಾಧಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದೇ ಎಂಇಎಸ್‍ಗೆ ನಿಷೇಧ ಹೇರಿ ಇಲ್ಲದಿದ್ದರೆ ಕರ್ನಾಟಕ ಬಂದ್‍ಗೆ ಕರೆ: ವಾಟಾಳ್ ನಾಗರಾಜ್

Leave a Reply

Your email address will not be published.

Back to top button