ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

Public TV
1 Min Read
Shilpa Shetty Raj kundra

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಅಶ್ಲೀಲ ಚಿತ್ರ ಮಾರಾಟ, ವಿತರಣೆ ವಿಚಾರದಲ್ಲಿ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಅವರನ್ನು ಬಂಧಿಸಿ, ಜೈಲುಗಟ್ಟಿದ್ದರು. ಇದೀಗ ಒಂದು ವರ್ಷಗಳ ನಂತರ ರಾಜ್ ಕುಂದ್ರಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

shilpa shetty

ಅಶ್ಲೀಲ ವೀಡಿಯೋ ಕೇಸ್ ವಿಷ್ಯವಾಗಿ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಸಾರ್ವಜನಿಕವಾಗಿ ದೂರ ಉಳಿದಿದ್ದರು. ಮುಖ ಮುಚ್ಚುವಂತೆ ಮಾಸ್ಕ್ ಧರಿಸಿ ರಾಜ್ ಕುಂದ್ರಾ ಓಡಾಡುತ್ತಿದ್ದರು. ಇದೀಗ ಒಂದು ವರ್ಷಗಳ ನಂತರ ರಾಜ್ ಕುಂದ್ರಾ ಮೌನ ಮುರಿದಿದ್ದಾರೆ. ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

SHILPA SHETTY 1

ಒಂದು ವರ್ಷದ ಬಳಿಕ ರಾಜ್‌ ಕುಂದ್ರಾ ಮಾತನಾಡಿದ್ದಾರೆ. ಸತ್ಯ ಶೀಘ್ರದಲ್ಲೇ ಹೊರ ಬೀಳಲಿದೆ. ನನ್ನ ಆತ್ಮೀಯರಿಗೆ ಧನ್ಯವಾದಗಳು ಮತ್ತು ನನ್ನನ್ನು ಮತ್ತಷ್ಟು ಬಲಿಷ್ಠವಾಗುವಂತೆ ಮಾಡಿದ ಟ್ರೋಲಿಗರಿಗೆ ದೊಡ್ಡ ಧನ್ಯವಾದಗಳು. `ನಿಮಗೆ ಪೂರ್ತಿ ಸತ್ಯ ಗೊತ್ತಿಲ್ಲವೆಂದೆರೆ ಬಾಯಿಮುಚ್ಚಿಕೊಂಡಿರಿ’ ರಾಜ್ ಕುಂದ್ರಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:‘ಲವ್ ಲಿ’ ಸಿನಿಮಾದ ಶೂಟಿಂಗ್ ನಲ್ಲಿ ಮತ್ತೆ ಬ್ಯುಸಿಯಾದ ವಸಿಷ್ಠ ಸಿಂಹ

ರಾಜ್ ಕುಂದ್ರಾ ಅವರ ಖಡಕ್ ಪ್ರತಿಕ್ರಿಯೆಗೆ ಕೆಲ ನೆಟ್ಟಿಗರು ಸಾಥ್ ನೀಡಿದ್ದಾರೆ. ಸ್ಟ್ರಾಂಗ್ ಆಗಿರಿ, ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಕಾಮೆಂಟ್ ಮೂಲಕ ರಾಜ್ ಕುಂದ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article