ಅಶ್ಲೀಲ ಚಿತ್ರ ನಿರ್ಮಾಣದ ವಿಚಾರವಾಗಿ ಜೈಲಿಗೂ ಹೋಗಿ ಬಂದಿರುವ ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ, ಜೈಲಿನಿಂದ ಆಚೆ ಬಂದ ಮೇಲೆ ಫೇಸ್ ಮಾಸ್ಕ್ (Face Mask) ಹಾಕಿಕೊಂಡೇ ಓಡಾಡುತ್ತಿದ್ದಾರೆ. ಮನೆಯಿಂದ ಆಚೆ ಬಂದರೆ, ಅವರು ಫೇಸ್ ಮಾಸ್ಕ್ ಸಮೇತ ಬರುತ್ತಾರೆ. ಆದಷ್ಟು ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಅವರು ಹಾಗೆಯೇ ಮಾಡುತ್ತಾ ಬಂದಿದ್ದಾರೆ.
ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿವೆ. ಮುಖಮುಚ್ಚಿಕೊಂಡು ಓಡಾಡುವಂತಹ ಕೆಲಸ ಮಾಡಿದ್ದೀರಿ. ತಪ್ಪು ತಿದ್ದಿಕೊಂಡು ಚೆನ್ನಾಗಿ ಮುಖ ತೋರಿಸಿ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ ಕುಂದ್ರಾ (Raj Kundra) ಟ್ರೋಲ್ ಮಾಡುವವರನ್ನು ನಿಂದಿಸಿದ್ದಾರೆ. ಅದಕ್ಕೆ ಮತ್ತೆ ಟ್ರೋಪಿಗರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್
ನೀವು ಫೇಮಸ್ ಅನ್ನುವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ. ನೀವು ಯಾರಿಗೂ ಗೊತ್ತೇ ಇಲ್ಲ ಅಂತಿದ್ದರೆ ಟ್ರೋಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ರಾಜ್ ಕುಂದ್ರಾ, ‘ನಾನು ಶಿಲ್ಪಾ ಶೆಟ್ಟಿ ಪತಿ ಅನ್ನುವುದೇ ನನಗೆ ನೆಗೆಟಿವ್ ಆಗಿದೆ. ಅವರಿಂದಾಗಿ ನಾನು ಮರ್ಯಾದೆ ಕಳೆದುಕೊಂಡೆ’ ಎಂದು ಪತಿಯ ಪಾಪ್ಯುಲಾರಿಟಿ ತಮಗೆ ಮುಳುವಾದ ಬಗ್ಗೆ ಉತ್ತರಿಸಿದ್ದಾರೆ.