ನವದೆಹಲಿ: ಬಾಲಿವುಡ್ ನಟ ರಾಜ್ ಕಪೂರ್ ಅವರ ಪತ್ನಿ ಕೃಷ್ಣ ರಾಜ್ ಕಪೂರ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕೃಷ್ಣಾ ರಾಜ್ ಕಪೂರ್(88) ಅವರು ಸೋಮವಾರ ಬೆಳಗಿನ ಜಾವ 5ರ ವೇಳೆಗೆ ಮೃತಪಟ್ಟಿದ್ದಾರೆ.
Advertisement
ಕೃಷ್ಣಾರಾಜ್ ಕಪೂರ್ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ರವೀನಾ ಟಂಡನ್, ಕಪೂರ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ದೇವರು ಅವರ ಕುಟುಂಬಕ್ಕೆ ಕೃಷ್ಣ ಕಪೂರ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಅವರಿಗೆ ಶಾಂತಿ ದೊರಕಲಿ. ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
Advertisement
.???????????????? Condolences to the entire Kapoor family. An era passes away,#KrishnaRajKapoor .God give you strength,and may the soul rest in peace. Om Shanti. @chintskap
— Raveena Tandon (@TandonRaveena) October 1, 2018
Advertisement
ನನ್ನ ತಾಯಿಯು ಹೃದಯಾಘಾತದಿಂದ ಸುಮಾರು 5 ಗಂಟೆಗೆ ನಿಧನರಾದರು. ನಾವು ಅವರ ನಿಧನದಿಂದ ದುಖಿಃತರಾಗಿದ್ದೇವೆ ಎಂದು ಪುತ್ರ ರಣ್ಧೀರ್ ಕಪೂರ್ ಹೇಳಿದ್ದಾರೆ.
Advertisement
ರಾಜ್ ಕಪೂರ್ ಅವರು ಕೃಷ್ಣಾ ಮಲ್ಹೋತ್ರ ಅವರನ್ನು 1946ರ ಮೇ ನಲ್ಲಿ ವಿವಾಹವಾಗಿದ್ದರು. ಇವರಿಗೆ ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಣ್ಧೀರ್ ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್ ಮತ್ತು ರಿತು, ರಿಮಾ ಅವರನ್ನು ಕೃಷ್ಣಾ ಮಲ್ಹೋತ್ರಾ ಈಗ ಅಗಲಿದ್ದಾರೆ.
ರಾಜ್ ಕಪೂರ್ ತಮ್ಮ 63ನೇ ವಯಸ್ಸಿನಲ್ಲಿ 1998ರ ಜೂನ್ 2 ರಂದು ನಿಧನರಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv