ಕನ್ನಡ ಚಿತ್ರರಂಗದಲ್ಲೀಗ (Sandalwood) ಮತ್ತೊಂದು ಸುತ್ತಿನ ಹೊಸ ಗಾಳಿ ಬೀಸಲಾರಂಭಿಸಿದೆ. ಹೊಸ ಬಗೆಯ, ಭಿನ್ನ ಕಥನಗಳೆಲ್ಲ ದೃಶ್ಯರೂಪ ಪಡೆದುಕೊಳ್ಳುತ್ತಿವೆ. ಈ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳನ್ನು ಹೊಂದಿರುವ ಚಿತ್ರ `ಹಗ್ಗ’ (Hagga Movie) . ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟು ಹಾಕಿ, ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಇದೇ ಶುಕ್ರವಾರ ಸೆ.20ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ಅಷ್ಟಕ್ಕೂ ಆರಂಭಿಕವಾಗಿ ಈ ಚಿತ್ರ ಸೆಳೆದಿದ್ದದ್ದು ಶೀರ್ಷಿಕೆಯ ಮೂಲಕ. ಆ ನಂತರದಲ್ಲಿ ಟೀಸರ್, ಟ್ರೈಲರ್ ಬಿಡುಗಡೆಗೊಂಡಾಗ ಪ್ರೇಕ್ಷಕರೆಲ್ಲ ತಾನೇ ತಾನಾಗಿ ಇದರತ್ತ ಆಕರ್ಷಿತರಾಗಿದ್ದರು. ಇದೀಗ ಹಗ್ಗದ ಸುತ್ತ ಗಾಢ ನಿರೀಕ್ಷೆ ಮೂಡಿಕೊಂಡಿದೆ. ಒಂದು ರಾತ್ರಿ ಮಗುಚಿಕೊಂಡೇಟಿಗೆ ಹಗ್ಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ. ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ರಾಜ್ ಭಾರದ್ವಾಜ್ (Raj Bhardwaj) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವಿನಾಶ್ (Avinash N) ನಿರ್ದೇಶನ ಹಗ್ಗ ಚಿತ್ರದಲ್ಲಿ ಅನು ಪ್ರಭಾಕರ್ (Anu Prabhakar) ವಿಭಿನ್ನ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈಗಾಗಲೇ ಅವರ ಪಾತ್ರದ ಸುತ್ತ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಅಂಥಾದ್ದೊಂದು ವಿಶೇಷವಾದ ಲುಕ್ಕಿನ ಝಲಕ್ಕುಗಳು ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇನ್ನುಳಿದಂತೆ ವೇಣು ಮತ್ತು ಹರ್ಷಿಕಾ ಪುಣಚ್ಚ ಕೂಡಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ಪುತ್ರ
ಹಗ್ಗ ಎಂಬುದು ನಿರ್ಮಾಪಕರಾದ ರಾಜ್ ಭಾರದ್ವಾಜ್ ಕನಸಿನ ಕೂಸು. ಅತೀವ ಸಿನಿಮಾ ವ್ಯಾಮೋಹಿಯಾದ ರಾಜ್ ಭಾರದ್ವಾಜ್ ಇಪ್ಪತ್ತು ವರ್ಷಗಳ ಹಿಂದೆಯೇ ಏನಾದರೊಂದು ಸಾಧಿಸಬೇಕೆಂಬ ಉತ್ಸಾಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಒಂದಷ್ಟು ಸಾಹಸಗಳ ಬಳಿಕವೂ ಅದೃಷ್ಟ ಕೈ ಹಿಡಿದಿರಲಿಲ್ಲ. ಎರಡ್ಮೂರು ವರ್ಷ ಪ್ರಯತ್ನಿಸಿ ಕಡೆಗೂ ರಾಜ್ ಬ್ಯುಸಿನೆಸ್‌ನತ್ತ ವಾಲಿಕೊಂಡಿದ್ದರು. ಇವತ್ತಿಗೆ ಇಡೀ ಕರ್ನಾಟಕದ ತುಂಬಾ ನೆಟ್ ವರ್ಕ್ ಹೊಂದಿರುವ ಜಿಮ್ ಸಲಕರಣೆ ಪೂರೈಸುವ ಉದ್ಯಮವನ್ನು ರಾಜ್ ಭಾರದ್ವಾಜ್ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ವೆಟ್ಟೈಯಾನ್’ಗೆ ಪೈಪೋಟಿ ಕೊಡಲ್ಲ- ‘ಕಂಗುವ’ ಪೋಸ್ಟ್‌ಪೋನ್..!
ಸಾಮಾನ್ಯವಾಗಿ ನಿರ್ಮಾಪಕರಾದವರಿಗೆ ಕ್ರಿಯೇಟಿವ್ ಸೆಕ್ಷನ್ನಿನ ಗಂಧ ಗಾಳಿ ಇರೋದಿಲ್ಲ ಎಂಬ ಮಾತಿದೆ. ಆದರೆ, ರಾಜ್ ಭಾರದ್ವಾಜ್ ಅದಕ್ಕೆ ಅಪವಾದದಂತಿದ್ದಾರೆ. ಈಗೊಂದಷ್ಟು ವರ್ಷಗಳ ಹಿಂದೆಯೇ ಹಗ್ಗದ ಒಂದೆಳೆ ಅವರೊಳಗೆ ಊಟೆಯೊಡೆಯಲಾರಂಭಿಸಿತ್ತು. ಅದನ್ನು ವರ್ಷಗಟ್ಟಲೆ ಚೆಂದಗೊಳಿಸಿ, ತಯಾರಿ ನಡೆಸಿದ್ದರ ಫಲವಾಗಿಯೇ ಹಗ್ಗ ದೃಶ್ಯ ರೂಪ ಧರಿಸಿದೆ. ಈ ಚಿತ್ರಕ್ಕೆ ಕಥೆ ಬರೆದಿರೋದಲ್ಲದೇ ಅವರೇ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯಲ್ಲಿಯೂ ಭಾಗಿಯಾಗಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ, ಮ್ಯಾಥ್ಯೂ ಮನು ಸಂಗೀತ ನಿರ್ದೇಶನ, ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮತ್ತು ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ (Harshika Poonacha), ತಬಲಾ ನಾಣಿ (Tabla Nani), ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದನ್ನೂ ಓದಿ: ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ