ಕನ್ನಡದ ಖ್ಯಾತ ನಟ – ನಿರ್ದೇಶಕ ರಾಜ್ ಬಿ ಶೆಟ್ಟಿ (Raj B. Shetty) ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳನ್ನು ಕನ್ನಡದಲ್ಲಿ ಒಂದರ ಇನ್ನೊಂದರಂತೆ ನೀಡುವ ಮೂಲಕ ದೇಶದಾದ್ಯಂತ ಜನರನ್ನು ಬೆರಗುಗೊಳಿಸಿ ಇದೀಗ ಮಲಯಾಳಂ ನಲ್ಲಿ ನಟಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಭಾರತದ ಕೆಲವೇ ಉತ್ತಮ ನಟರಲ್ಲಿ ಒಬ್ಬರಾದ ಮಮ್ಮುಟ್ಟಿ ಅವರು ಸ್ವತಃ ನಿರ್ಮಿಸಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಟರ್ಬೋ’ (Turbo) ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುದು ಎಲ್ಲರ ಕುತೂಹಲವನ್ನು ಹುಟ್ಟುವಾಕುವಂತೆ ಮಾಡಿದ್ದಾರೆ. ನೆನ್ನೆ ದುಬೈನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಮಲಯಾಳಂ ನಲ್ಲಿ ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಖ್ಯಾತ ಬರಹಗಾರರಾಂತ ಮಿಥುನ್ ಮ್ಯಾನುವಲ್ ಥಾಮಸ್ ಅವರು ಬರೆದಿದ್ದಾರೆ.
ಮಮ್ಮುಟ್ಟಿಯವರ ಒಡೆತನದ ‘ಮಮ್ಮುಟ್ಟಿ ಕಂಪನಿ’ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ. ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ‘ ಲೈಟರ್ ಬುದ್ಧ ಫಿಲಂಸ್’ ಹಂಚಿಕೆ ಮಾಡುತ್ತಿದೆ.