ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ, ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ನಟ ಕಮ್ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ದೈತ್ಯ ಪ್ರತಿಭೆ ರಾಜ್ ಬಿ ಶೆಟ್ಟಿ (Raj B Shetty) ಮೊನ್ನೆಯಷ್ಟೇ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ‘ಗರುಡ ಗಮನ ವೃಷಭ ವಾಹನ’ (Garuda Gamana Vrushaba Vahana) ಸಿನಿಮಾ ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ಈ ತಂಡದ ಕಡೆಯಿಂದ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ತಿಳಿಸೋದಾಗಿ ಹೇಳಿದ್ದರು. ಇದೀಗ ಅಂದುಕೊಂಡಂತೆ ನಡೆದಿದ್ದಾರೆ.
ತಾವು ಹೇಳಿದ ದಿನಾಂಕ ಮತ್ತು ಸಮಯಕ್ಕೆ ಹೊಸ ಸಿನಿಮಾದ ಅಪ್ ಡೇಟ್ ನೀಡಿದ್ದು, ಈ ಚಿತ್ರಕ್ಕೆ ‘ಟೋಬಿ’ (Toby) ಎಂದು ಹೆಸರಿಟಿದ್ದಾರೆ. ಅದರ ಜೊತೆಗೆ ಈ ಸಿನಿಮಾ ಇದೇ ಆಗಸ್ಟ್ 25 ರಂದು ರಿಲೀಸ್ ಮಾಡುವುದಾಗಿಯೂ ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ರಾಜ್ ಬಿ ಶೆಟ್ಟಿ, ‘ಮಾರಿ.. ಮಾರಿ.. ಮಾರಿಗೆ ದಾರಿ. ಟೋಬಿ.. ಆಗಸ್ಟ್ 25ರಂದು ನಿಮ್ಮ ಮುಂದೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟನ ಜೊತೆಗಿನ ಡೇಟಿಂಗ್ ಒಪ್ಪಿಕೊಂಡ ನಟಿ ತಮನ್ನಾ
ರಾಜ್ ಬಿ ಶೆಟ್ಟಿ ಬಹುಮುಖ ಪ್ರತಿಭೆ. ನಟ- ನಿರ್ದೇಶಕ, ಬರಹಗಾರನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ನೇತೃತ್ವದ Lighters Buddha Film ಅಡಿಯಲ್ಲಿ ವಚನ್ ಶೆಟ್ಟಿ, ರವಿ ರೈ ನಿರ್ಮಾಣ ಮಾಡಿದ್ದರು. ಇವರ ಜೊತೆ Agastya Films ಜಂಟಿಯಾಗಿ ಬರುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಹೊಸ ಸಿನಿಮಾ ಮೂಡಿ ಬಂದಿದೆ.
ರಾಜ್ ಬಿ ಶೆಟ್ಟಿ ಅವರ ಕೈಯಲ್ಲಿ ಟೋಬಿ, ನಟಿ ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’, ರಾಮನ ಅವತಾರ, ಸೇರಿದಂತೆ ಹಲವು ಚಿತ್ರಗಳು ಕೈಯಲ್ಲಿದೆ. ಇನ್ನೂ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಕಂಟೆಂಟ್ ಭಿನ್ನವಾಗಿತ್ತು. ಈ ಚಿತ್ರವನ್ನ ಫ್ಯಾನ್ಸ್ ನೋಡಿ ಇಷ್ಟಪಟ್ಟಿದ್ದರು. ಇದೀಗ ತಂಡದ ಕಡೆಯಿಂದ ಮತ್ತೊಂದು ಸಿನಿಮಾ ಅಂದಾಕ್ಷಣ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.