ಮಹಾ ಕುಂಭಮೇಳದಲ್ಲಿ ನಟ ರಾಜ್ ಬಿ ಶೆಟ್ಟಿ, ಅನುಶ್ರೀ (Anchor Anushree) ಭಾಗಿಯಾದ ಬಳಿಕ ಸದ್ಯ ಕಾಶಿಯಲ್ಲಿದ್ದಾರೆ. ಸ್ನೇಹಿತರ ಜೊತೆ ರಾಜ್ ಮತ್ತು ಅನುಶ್ರೀ ಕಾಲ ಕಳೆಯುತ್ತಿದ್ದಾರೆ. ಕಾಶಿಗೆ ಭೇಟಿ ನೀಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Advertisement
ಕುಂಭಮೇಳದಲ್ಲಿ ಅನುಶ್ರೀ, ರಾಜ್ ಬಿ ಶೆಟ್ಟಿ (Raj B Shetty) ಮತ್ತು ಸ್ನೇಹಿತರು ಪವಿತ್ರಾ ಸ್ನಾನ ಮಾಡಿ ದೇವರ ದರ್ಶನ ಪಡೆದ ಬಳಿಕ ಪ್ರಯಾಗ್‌ರಾಜ್‌ನಿಂದ ಕಾಶಿಗೆ ಆಗಮಿಸಿದ್ದಾರೆ. ಅಲ್ಲಿನ ಬೀದಿ ನಾಯಿ ಜೊತೆ ಸಮಯ ಕಳೆಯುತ್ತಾ ನಟ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಕುರಿತ ಸುಂದರ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಿಸ್ಟರಿ ಮ್ಯಾನ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖುಷಿ ಕಪೂರ್
Advertisement
View this post on Instagram
Advertisement
ಇನ್ನೂ ಅನುಶ್ರೀ ರಿಯಾಲಿಟಿ ಶೋ ನಿರೂಪಣೆಯಲ್ಲಿ ಬ್ಯುಸಿಯಿದ್ರೆ, ರಾಜ್ ಬಿ ಶೆಟ್ಟಿ ಕೈಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡ, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ರಾಜ್ ಬಿ ಶೆಟ್ಟಿ ತೊಡಗಿಸಿಕೊಂಡಿದ್ದಾರೆ.
Advertisement
ಇನ್ನೂ ಕನ್ನಡದ ಟೋಬಿ, ಮಲಯಾಳಂ ‘ಟರ್ಬೊ’ ಚಿತ್ರದಲ್ಲಿನ ರಾಜ್ ಬಿ ಶೆಟ್ಟಿ ನಟನೆ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.