ನವದೆಹಲಿ: ನ್ಯಾಯಾಧೀಶರ ನಿವೃತ್ತಿ ವಯಸ್ಸಿಗೆ ತಿದ್ದುಪಡಿ(Raise Retirement Age) ತರುವಂತೆ ಭಾರತೀಯ ಬಾರ್ ಕೌನ್ಸಿಲ್(Bar Council) ಕೇಂದ್ರ ಸರ್ಕಾರಕ್ಕೆ(Central Government) ಒತ್ತಾಯಿಸಿದೆ.
Advertisement
ಬುಧವಾರ ನಡೆದ ಎಲ್ಲ ರಾಜ್ಯಗಳ ಬಾರ್ ಕೌನ್ಸಿಲ್‍ಗಳ ಜೊತೆಗಿನ ಸಭೆ ಬಳಿಕ ಒಮ್ಮತದ ನಿರ್ಧಾರ ಕೈಗೊಂಡಿದ್ದು ಸಾಂವಿಧಾನಿಕ ತಿದ್ದುಪಡಿ ತರಲು ಅದು ಸರ್ಕಾರಕ್ಕೆ ಮನವಿ ಮಾಡಿದೆ. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು
Advertisement
Advertisement
ನಿನ್ನೆ ನಡೆದ ಸಭೆಯಲ್ಲಿ ಹೈಕೋರ್ಟ್(High Court) ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 62 ರಿಂದ 65 ವರ್ಷಕ್ಕೆ, ಸುಪ್ರೀಂ ಕೋರ್ಟ್‍ನ(Supreme Court )ನ್ಯಾಯಾಧೀಶರ ನಿವೃತ್ತಿಯ ವಯಸ್ಸು 67 ವರ್ಷಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಈ ನಿರ್ಣಯದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಿಗೆ ಕಳುಹಿಸಿದ್ದು, ಕ್ರಮಕ್ಕಾಗಿ ಮನವಿ ಮಾಡಿದೆ ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇದು ಸರ್ಕಾರಿ ಪ್ರಾಯೋಜಿತ ಕೊಲೆ – ವಿಮ್ಸ್ ದುರಂತಕ್ಕೆ ಸಿದ್ದು ಕಿಡಿ
Advertisement
ಇದರ ಜೊತೆಗೆ ಅನುಭವಿ ವಕೀಲರನ್ನು ವಿವಿಧ ಆಯೋಗಗಳು ಮತ್ತು ಇತರ ವೇದಿಕೆಗಳ ಅಧ್ಯಕ್ಷರನ್ನಾಗಿ ನೇಮಿಸಲು ಹಾಗೂ ಶಾಸನಗಳನ್ನು ತಿದ್ದುಪಡಿ ಮಾಡಲು ಪರಿಗಣಿಸಲು ಸಂಸತ್ತಿಗೆ ಪ್ರಸ್ತಾಪಿಸಲು ಜಂಟಿ ಸಭೆ ನಿರ್ಧರಿಸಿದೆ ಎಂದು ಬಾರ್ ಕೌನ್ಸಿಲ್ ತಿಳಿಸಿದೆ.