ಮಳೆಗಾಲದಲ್ಲಿ (Rainy Season) ವಿವಿಧ ಬಣ್ಣಗಳು ಮತ್ತು ಬಟ್ಟೆಗಳನ್ನು ನಾರಿಮಣಿಯರು ಪ್ರಯೋಗ ಮಾಡಬಹುದು. ಮಾನ್ಸೂನ್ ವಿಷಯಕ್ಕೆ ಬಂದರೆ ಸ್ಟೈಲಿಶ್ ಮತ್ತು ಗ್ಲಾಮರಸ್ ಆಗಿ ಮಿಂಚಬಹುದು. ಹೊರಗೆ ಮಳೆ ಬರುತ್ತಾ ಇದ್ದರೆ ಯಾವ ಬಟ್ಟೆ ಧರಿಸಬೇಕು, ಯಾವ ಬಟ್ಟೆ ತೊಡಬಾರದು ಅನ್ನೋದೇ ಕಷ್ಟ. ಅದಕ್ಕೆ ಇಲ್ಲಿದೆ ಫ್ಯಾಷನ್ ಟಿಪ್ಸ್.
ಮಳೆಗಾಲದಲ್ಲೂ ನಾರಿಮಣಿಯರು ಶಾರ್ಟ್ ಕುರ್ತಾಗಳನ್ನು ಧರಿಸಲು ಇಷ್ಟಪಡುತ್ತಾರೆ. ಕಾಟನ್ ಶಾರ್ಟ್ ಟಾಪ್‌ಗೆ ಜೀನ್ಸ್ ಧರಿಸಬಹುದು. ಹೂವಿನ ಚಿತ್ತಾರವಿರುವ ಟಾಪ್, ತೋಳುಗಳಿಲ್ಲದ ಟಾಪ್ ಸ್ಟೈಲಿಶ್ ಸ್ವೆಟರ್ ಧರಿಸಿ ಮಿಂಚಬಹುದು. ಇದನ್ನೂ ಓದಿ:‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್
ಪಫರ್ ಜಾಕೆಟ್: ಈ ಕಾಲಕ್ಕೆ ತಕ್ಕ ಹಾಗೆ ನಮ್ಮ ವೇಷವನ್ನು ಬದಲಾಯಿಸಿಕೊಳ್ಳಬೇಕು. ಚಳಿಗಾಲದಲ್ಲಿ ನಾವು ಇನ್ನಷ್ಟು ಸುಂದರವಾಗಿ ಕಾಣಲು ಮತ್ತು ನಮ್ಮ ದೇಹದ ರಕ್ಷಣೆಗಾಗಿ ಪಫರ್ ಜಾಕೆಟ್ ಧರಿಸೋದು ಉತ್ತಮ. ಕ್ಯಾಪ್ ಒಳಗೊಂಡಿರುವ ಜಾಕೆಟ್‌ಗಳನ್ನು ಮಹಿಳೆಯರು ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಮಹಿಳೆಯರು ದೇಹಕ್ಕೆ ಹೊಂದಿಕೊಳ್ಳುವ ಜಾಕೆಟ್‌ಗಳನ್ನು ಧರಿಸುವುದು ಬೆಸ್ಟ್.
ಬ್ಲ್ಯಾಂಕೆಟ್ ಡ್ರೆಸ್ಸಿಂಗ್: ಚಳಿಗಾಲದಲ್ಲಿ ನಾವು ಬ್ಲ್ಯಾಂಕೆಟ್‌ಗಳನ್ನು ಧರಿಸುವುದರಿಂದ ನಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಈ ಬಗ್ಗೆ ಬ್ಲ್ಯಾಂಕೆಟ್‌ಗಳು ಮಹಿಳೆಯರನ್ನು ಮತ್ತಷ್ಟು ಬ್ಯೂಟಿಪುಲ್ ಆಗಿ ಕಾಣುವಂತೆ ಮಾಡುತ್ತದೆ. ಮಹಿಳೆಯರ ದೇಹದ ರಕ್ಷಣೆಯನ್ನು ಬ್ಲ್ಯಾಂಕೆಟ್ ಮಾಡುತ್ತದೆ. ಇದನ್ನೂ ಓದಿ:‘ಚೌಕಿದಾರ್’ ಚಿತ್ರದ ಟೀಸರ್ ರಿಲೀಸ್- ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್ ಅಬ್ಬರ
ಮಿನಿ ಡ್ರೆಸ್ ವಿತ್ ಜಾಕೆಟ್: ಮಳೆಗಾಲದಲ್ಲಿ ಮಿನಿ ಡ್ರೆಸ್‌ಗೆ ಜಾಕೆಟ್ ಧರಿಸೋದು ಉತ್ತಮ. ಸಂಜೆ ಡಿನ್ನರ್ ಪಾರ್ಟಿಗೆ, ನೈಟ್ ಔಟ್‌ಗೆ ಹೇಳಿ ಮಾಡಿಸಿದಂತಿರುತ್ತದೆ. ಈಗಿನ ಕಾಲಕ್ಕೂ ಇದು ಟ್ರೆಂಡಿಯಾಗಿದೆ.
ಗೌನ್ ಜೊತೆ ಶಾಲು: ಚುಮು ಚುಮು ಚಳಿ ಮತ್ತು ಮಳೆಗಾಲಕ್ಕೆ ಗೌನ್ ಬೆಸ್ಟ್. ಮಳೆಗಾಲದಲ್ಲಿ ಗೌನ್ ಧರಿಸೋದು ಫ್ಯಾಷನ್‌ಗೂ ಸೈ. ಗೌನ್ ಎಲ್ಲಾ ಕಾಲಕ್ಕೂ ಸರಿಹೊಂದುವ ಬಟ್ಟೆಯಾಗಿದೆ. ಶಾಲಿನ ಜೊತೆ ಗೌನ್ ಧರಿಸಿ ಸಿಂಪಲ್ ಮೇಕಪ್ ಮಾಡಿಕೊಂಡು ಮಿಂಚಬಹುದು.