-ಮುಂದಿನ ಮೂರು ಗಂಟೆ ಬೆಂಗಳೂರು ಸೇರಿ ಹಲವೆಡೆ ಮಳೆ ಸಾಧ್ಯತೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಮೋಡ ಕವಿದ ವಾತಾವರಣವಿದ್ದು, ಈಗಾಗಲೇ ಕೆಲವೆಡೆ ತುಂತುರು ಮಳೆ ಆರಂಭವಾಗಿದೆ. ಮುಂದಿನ ಮೂರು ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಇದನ್ನೂ ಓದಿ: ಧಾರವಾಡದಲ್ಲಿ ಗಾಳಿ ಸಹಿತ ಮಳೆ – ಆಂಜನೇಯ ದೇವಸ್ಥಾನದ ಮೇಲೆ ಬಿದ್ದ ಮರ
ಬೆಂಗಳೂರಿನ ಹೆಬ್ಬಾಳ, ರಾಜಾಜಿನಗರ, ಮತ್ತಿಕೆರೆ, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ಮಲ್ಲೇಶ್ವರಂ ಹಲವೆಡೆ ವರುಣನ ಆರ್ಭಟಿಸುತ್ತಿದ್ದು, ಯಶವಂತಪುರ ಸೇರಿದಂತೆ ಕೆಲವು ಕಡೆ ತುಂತುರು ಮಳೆಯಾಗುತ್ತಿದೆ. ಇನ್ನೂ ಕೆಲವು ಕಡೆ ಮೋಡ ಕವಿದ ವಾತಾವರಣವಿದೆ.
ಹವಮಾನ ಇಲಾಖೆ ಏ.17ರವರೆಗೆ ಮಳೆಯ ಮುನ್ಸೂಚನೆ ನೀಡಿದ್ದು, ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ