ಮಡಿಕೇರಿ: ಸಂಪಾಜೆ ಘಾಟಿ ರಸ್ತೆಯಲ್ಲಿರುವ ಜೋಡುಪಾಲದ ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು, ಒಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ದೇವರ ಕೊಲ್ಲಿ, ಜೋಡುಪಾಲ, ಮದೇನಾಡಿನಲ್ಲಿ ಭೂಕುಸಿತವಾಗುತ್ತಿದ್ದು ಬೆಟ್ಟ ಪ್ರದೇಶದಲ್ಲಿದ್ದ 250ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದವರಲ್ಲಿ ಕೆಲ ಮಂದಿಯನ್ನು ಮಡಿಕೇರಿ ಗಂಜಿ ಕೇಂದ್ರಕ್ಕೆ ಕಳುಹಿಸಿದರೆ ಇನ್ನು ಕೆಲವರನ್ನು ಸಂಪಾಜೆ, ಕಲ್ಲುಗುಂಡಿ, ಗೂನಡ್ಕದಲ್ಲಿರುವ ಶಾಲೆಗೆ ಕಳುಹಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಸಿದ ಸಂಪಾಜೆ ಶಮೀರ್ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆದು, ಹಲವು ಮಂದಿಯನ್ನು ನಾವು ರಕ್ಷಣೆ ಮಾಡಿದ್ದೇವೆ. ಪೊಲೀಸರ ಸಹಾಯದಿಂದ ಹಗ್ಗಕಟ್ಟಿ ರಕ್ಷಣಾ ಕಾರ್ಯಚರಣೆ ಮಾಡಿದ್ದೇವೆ. ಘಾಟಿ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ಅಲ್ಲಲ್ಲಿ ಬಂಡೆಕಲ್ಲುಗಳು ಮತ್ತು ಗುಡ್ಡಗಳು ಜರಿದು ಬಿದ್ದಿದೆ. ಕೆಲವು ಕಡೆ ಬಿರುಕು ಬಿಟ್ಟಿದೆ. ಹೀಗಾಗಿ ಮಳೆ ನಿಂತು ರಸ್ತೆ ರಿಪೇರಿಯಾಗಲು ಹಲವು ದಿನಗಳು ಬೇಕಾಗಬಹುದು ಎಂದು ಹೇಳಿದರು. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ
ಇಂದು ರಾತ್ರಿ ಸಂಪಾಜೆಯಲ್ಲಿರುವ ಗಂಜಿಕೇಂದ್ರದಲ್ಲಿರುವ ಸಂತ್ರಸ್ತರ ನೋವು ಅಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವ ಯುಟಿ ಖಾದರ್ ಆಗಮಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv