ಮಡಿಕೇರಿ: ಕೊಡಗಿನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಮರಣ ಮಳೆಯಾಗಿ ಮಾರ್ಪಾಡಾಗುತ್ತಿದೆ. ದೇವಸ್ತೂರು ಎಂಬಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಮುಕ್ಕೊಡ್ಲಿನಲ್ಲಿ 40ಕ್ಕೂ ಹೆಚ್ಚು ಮಂದಿ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ.
ಮೂವತೊಕ್ಲು ಗ್ರಾಮದಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಸಂಪಾಜೆ ಬಳಿಯಿರುವ ಜೋಡುಪಾಲ ಎಂಬಲ್ಲಿ ಗುಡ್ಡ ಕುಸಿದು ಮನೆ ಸಹಿತ ಹಲವು ಮಂದಿ ಹೊಳೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೂಡಿಗೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀರು ನುಗ್ಗಿದ್ದು, ವಸ್ತುಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
Advertisement
Advertisement
Advertisement
ಮಡಿಕೇರಿ ಸಮೀಪದ ಮುಕ್ಕೊಡ್ಲು, ದೇವಸ್ತೂರು ಗ್ರಾಮಗಳು ಜಲಾವೃತವಾಗಿವೆ. ಮಾದಾಪುರ, ಮುವತೋಕ್ಲು, ಶಿರಂಗಳ್ಳಿ, ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ, ಹಮ್ಮೀಯಾಲ, ಮುಟ್ಲು, ತಾಕೇರಿ, ಶಾಂತಳ್ಳಿ, ಕುಡಿಗಾಣ, ಕೊತ್ನಳ್ಳಿ ಈ ಭಾಗದಲ್ಲಿ ಬೆಟ್ಟಗುಡ್ಡಗಳು ಕುಸಿಯುವ ಆತಂಕ ಇದೆ.
Advertisement
ಗರ್ವಾಲೆ ಗ್ರಾಮದ ಹತ್ತಿರ 4 ಎಕರೆ ಭಾಗ ಕುಸಿದಿದೆ. ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಜನ ಪ್ರವಾಹದಿಂದ ರಕ್ಷಣೆಗಾಗಿ ಗುಡ್ಡ ಏರಿ ಕುಳಿತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ
ಮಕ್ಕಂದೂರಿನಲ್ಲಿ ಗುಡ್ಡವೊಂದು ಕುಸಿದುಬಿದ್ದಿತ್ತು. ಅಲ್ಲಿ ಸೇನಾ ಹೆಲಿಕಾಪ್ಟರ್ ನಲ್ಲಿ ರಕ್ಷಣಾ ಕಾರ್ಯ ನಡೆಯಿತು. ಗೋಣಿಕೋಪ್ಪ, ಶ್ರೀಮಂಗಲ-ಕ್ಯಾಲಿಕಟ್ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಮ, ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ದಕ್ಷಿಣ ಕನ್ನಡ- ಕೊಡಗಿನ ಗಡಿ ಪ್ರದೇಶವಾದ ಭಾಗದಲ್ಲಿ ಪಯಸ್ವಿನಿ ನದಿಯ ಜೊತೆಗೆ ಕಿರು ನದಿಗಳು ಉಕ್ಕಿ ಹರಿಯತ್ತಿದೆ. ಹೀಗಾಗಿ ಈ ನದಿ ತೀರದ ಪ್ರದೇಶದಲ್ಲಿರುವ ಜನರಿಗೆ ಸಂಪಾಜೆ, ಕಲ್ಲುಗುಂಡಿಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv