ಬೆಂಗಳೂರು: ಮುಂಗಾರು ಆರಂಭವಾದರೂ ವರುಣ ಮಾತ್ರ ನೆಲಕ್ಕಿಳಿದಿಲ್ಲ. ಇದರಿಂಗಾಗಿ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಆದರೆ ಈಗ ಮುಂದಿನ 5 ದಿನಗಳಲ್ಲಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ದಕ್ಷಿಣ ಒಳನಾಡುಗಳಲ್ಲಿ ಧಾರಕಾರ ಮಳೆಯಾಗುವ ನಿರೀಕ್ಷೆ ಇದೆ. ಅರಮನೆ ನಗರಿ ಮೈಸೂರಿನಲ್ಲಿ ಇಂದು ವರುಣ ತಂಪೆರೆದಿದ್ದಾನೆ. ಅರ್ಧ ಗಂಟೆ ಕಾಲ ಸುರಿದ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಮೈಸೂರು ಜನತೆ ಮಳೆಯಿಂದ ಕೊಂಚ ಕೂಲ್ ಆಗಿದ್ದಾರೆ.
Advertisement
Advertisement
ಧಾರವಾಡ, ಯಾದಗಿರಿಯ ವಿವಿಧೆಡೆ ಇಂದು ಮಳೆಯಾಗಿದೆ. ಈ ಮಧ್ಯೆ ಉಡುಪಿಯಲ್ಲಿ ಮಳೆ ಬಿರುಗಾಳಿ ಇಲ್ಲದಿದ್ದರೂ ಕೆಎಂಸಿ ಆಸ್ಪತ್ರೆ ಆವರಣದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಮರದಡಿಯಲ್ಲಿ ಮಲಗಿದ್ದ ಇಬ್ಬರಿಗೆ ಗಾಯಗಳಾಗಿವೆ. ಮರ ಬಿದ್ದು 4 ಕಾರುಗಳು ಜಖಂ ಆಗಿವೆ. ಮರದಲ್ಲಿ ಬೀಡು ಬಿಟ್ಟಿದ್ದ ಸಾವಿರಾರು ಬಾವಲಿಗಳು ನೆಲೆ ಕಳೆದುಕೊಂಡಿವೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]