– ಸಿಡಿಲಿಗೆ ಓರ್ವ ಬಾಲಕ, ಮೇಕೆ, ಎರಡು ಎತ್ತುಗಳು ಬಲಿ
ಬೆಂಗಳೂರು: ರಾಜ್ಯದ ಹಲವೆಡೆ ಮಳೆಯಾಗಿದ್ದು (Rain), ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆರಾಯ ತಂಪೆರಿದ್ದಾನೆ.
Advertisement
ಚಿಕ್ಕಮಗಳೂರಿನ ತರೀಕೆರೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ವರ್ಷದ ಮೊದಲ ಮಳೆಯಲ್ಲೇ ರಸ್ತೆಯಲ್ಲಿ 2-3 ಅಡಿ ನೀರು ಹರಿದಿದೆ. ಮಳೆಯಿಂದಾಗಿ ವಾಹನಗಳ ಸಂಚಾರಕ್ಕೆ ಸ್ವಲ್ಪ ಸಮಯ ತೊಂದರೆ ಸಹ ಉಂಟಾಗಿದೆ.
Advertisement
Advertisement
ಬಿಸಿಲನಾಡು ಬಾಗಲಕೋಟೆಯಲ್ಲೂ ಎರಡು ದಿನಗಳಿಂದ ಮಧ್ಯಾಹ್ನದ ವೇಳೆ ಮಳೆಯಾಗುತ್ತಿದೆ. ಇಂದು ಸಹ ವಿದ್ಯಾಗಿರಿ, ಹಳೆ ಬಾಗಲಕೋಟೆ ಸೇರಿದಂತೆ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಮಳೆಯಿಂದಾಗಿ ಬಿಸಿಲಿನಿಂದ ಕಂಗೆಟ್ಟ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
Advertisement
ಮಡಿಕೇರಿ ನಗರ ಸೇರಿದಂತೆ, ತಾಲೂಕಿನ ಹಲವೆಡೆ ಗಂಟೆಗಳ ಕಾಲ ಮಳೆಯಾಗಿದೆ. ಮಡಿಕೇರಿ, ಸುಂಟಿಕೊಪ್ಪ, ಮದೆನಾಡು, ಗಾಳಿಬೀಡು ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಳೆ ಇಲ್ಲದೆ ಕಂಗಾಲಾಗಿದ್ದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ದಿಢೀರ್ ಮಳೆಯಿಂದ ವಾಹನ ಸವಾರರ ಪರದಾಡಿದ್ದಾರೆ.
ಗಡಿ ಜಿಲ್ಲೆ ಬೀದರ್‌ನಲ್ಲಿ ಸತತ ಒಂದು ಗಂಟೆಗೂ ಹೆಚ್ಚಿನ ಸಮಯ ಮಳೆಯಾಗಿದೆ. ಬೀದರ್, ಹುಮ್ನಾಬಾದ್, ಬಸವಕಲ್ಯಾಣ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ರಣ ಬಿಸಿಲಿನಿಂದ ಬೇಸತ್ತಿದ್ದ ಜನ ಧಾರಾಕಾರ ಮಳೆಯನ್ನು ಸಂಭ್ರಮಿಸಿದ್ದಾರೆ.
ರಾಯಚೂರಿನಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಓರ್ವ ಬಾಲಕ ಸೇರಿದಂತೆ ಒಂದು ಮೇಕೆ, ಎರಡು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಸಿಂಧನೂರು ತಾಲೂಕಿನ ಮಲ್ಕಾಪುರ ಕ್ಯಾಂಪಿನ ಜಮೀನೊಂದರಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಬಾಲಕ ಹಾಗೂ ಒಂದು ಮೇಕೆ ಸಾವನ್ನಪ್ಪಿದೆ.
ಅಮರಾಪುರ ಗ್ರಾಮದ ಶಾಂತಕುಮಾರ (16) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇನ್ನೂ ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದಲ್ಲಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.
ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಹಗುರ ಮಳೆಯಾಗಿದೆ. ಕೊಪ್ಪಳದಲ್ಲೂ ಸಹ ಗಾಳಿ ಮಳೆಯಾಗಿದೆ. ದಾವಣಗೆರೆಯಲ್ಲೂ ಉತ್ತಮ ಮಳೆಯಾಗಿದೆ. ಯಾದಗಿರಿಯಲ್ಲಿ ಅರ್ಧಗಂಟೆಗೂ ಹೆಚ್ಚಿನ ಸಮಯ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಬೇಸತ್ತ ಜನ ಕೊಂಚ ಸಂಭ್ರಮಿಸಿದ್ದಾರೆ.
ರಾಜ್ಯದಲ್ಲಿ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.