– ಮನೆಗಳಿಗೆ ನುಗ್ಗಿದ ಮಳೆ ನೀರು
– ಕೆಂಗೇರಿ, ಆರ್.ಆರ್ ನಗರ ಸುತ್ತಮುತ್ತ ಜೋರು ಮಳೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆಯ ಸಿಂಚನವಾಗಿದೆ. ಚಂಡಮಾರುತದ ಎಫೆಕ್ಟ್‌ನಿಂದ ಭರ್ಜರಿಯಾಗಿ ಸುರಿದ ಬಳಿಕ ಮಳೆ ಎರಡು ದಿನ ಬಿಡುವು ಕೊಟ್ಟಿತ್ತು. ಈಗ ಬೆಳ್ಳಂಬೆಳಗ್ಗೆ ತುಂತುರು ಮಳೆ ಸುರಿದಿದೆ.
Advertisement
ಶನಿವಾರ ಬೆಳಗ್ಗೆಯಿಂದಲೇ ಮಳೆ ಶುರುವಾಯಿತು. ನಂತರ ರಾತ್ರಿ ವೇಳೆಗೆ ಕೊಂಚ ಬಿಡುವು ನೀಡಿತ್ತು. ಇಂದು ಮತ್ತೆ ಬೆಳಗ್ಗೆಯೇ ತುಂತುರು ಮಳೆ ಶುರುವಾಗಿದೆ. ನಗರದ ಬಹುತೇಕ ಭಾಗದಲ್ಲಿ ತುಂತುರು ಮಳೆ ಹನಿಯುತ್ತಿದೆ. ಇದನ್ನೂ ಓದಿ: ಮುಡಾ ಮೇಲಿನ ಇ.ಡಿ ದಾಳಿ ಅಂತ್ಯ – ಸತತ 29 ಗಂಟೆ ಅಧಿಕಾರಿಗಳಿಗೆ ಡ್ರಿಲ್
Advertisement
ಎಲ್ಲೆಲ್ಲಿ ಪರಿಸ್ಥಿತಿ ಹೇಗೆ?
ಕುಮಾರಸ್ವಾಮಿ ಲೇಔಟ್: ನಿನ್ನೆ ಸುರಿದ ಮಳೆಗೆ ಕುಮಾರಸ್ವಾಮಿ ಲೇಔಟ್ ರಸ್ತೆ ಜಲಾವೃತವಾಗಿದೆ. ಸುಮಾರು 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ. ಆದರೆ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ.
Advertisement
ಎಲೆಕ್ಟ್ರಾನಿಕ್ ಸಿಟಿ ಟು ಸಿಲ್ಕ್ ಬೋರ್ಡ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಬೊಮ್ಮನಹಳ್ಳಿಯಿಂದ ಸಿಲ್ಕ್ ರೋಡ್ ಜಂಕ್ಷನ್ ರೋಡ್ ಟ್ರಾಫಿಕ್ ಜಾಮ್ ಆಗಿದೆ. ರೋಡ್ ಮೇಲೆ ನೀರು ನಿಂತಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರ ಮಾಡಲಾಗದೇ ವಾಹನ ಸವಾರರು ಪರದಾಡಿದ್ದಾರೆ.
Advertisement
ಸರ್ಜಾಪುರ: ರಾತ್ರಿ ಸುರಿದ ಮಳೆಗೆ ಪರಪ್ಪನ ಅಗ್ರಹಾರ ಸರ್ಜಾಪುರ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ನಾಗನಾಥಪುರ ಬಳಿ ರಸ್ತೆಯಲ್ಲಿ ನೀರು ತುಂಬಿದೆ. ಪ್ರತಿ ಬಾರಿ ಮಳೆ ಬಂದರೂ ಸಹ ಇದೇ ಪರಿಸ್ಥಿತಿ ಇದೆ. ಮಳೆ ಹಿನ್ನೆಲೆ ಸಂಪೂರ್ಣ ರಸ್ತೆ ಗುಂಡಿಮಯವಾಗಿದೆ. ರಸ್ತೆ ಯಾವುದು, ಗುಂಡಿ ಯಾವುದೂ ಕಾಣದ ಪರಿಸ್ಥಿತಿಯಲ್ಲಿ ವಾಹನ ಸವಾರರಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಟಿಕೆಟ್ ಆಯ್ಕೆ ಕಗ್ಗಂಟು – ದೋಸ್ತಿ ನಾಯಕರಲ್ಲಿ ಮೂಡದ ಒಮ್ಮತದ ನಿರ್ಧಾರ
ಸಾಯಿ ಲೇಔಟ್: ಇಂದು ಕೂಡ ಸಾಯಿ ಲೇಔಟ್ ಜಲಾವೃತಗೊಂಡಿದೆ. 500 ಮನೆಗಳಿರುವ ಪ್ರತಿಷ್ಠಿತ ಬಡಾವಣೆಯಲ್ಲಿ 10 ವರ್ಷಗಳಿಂದ ಅದೇ ಜಲ ಸಂಕಷ್ಟವಿದೆ. ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ರಸ್ತೆಯಲ್ಲೇ ಕೊಳಕು ನೀರು ನಿಂತಿದೆ. ಮೊನ್ನೆಯಷ್ಟೇ ಫೈರ್ ಇಂಜಿನ್ ಬಂದು ನೀರು ಹೊರ ಹಾಕಿತ್ತು. ಈಗ ಮತ್ತೇ ರಸ್ತೆಯಲ್ಲಿ ನೀರು ತುಂಬಿ ಜನ ಹೈರಾಣಾಗಿದ್ದಾರೆ. ಮೊನ್ನೆಯ ಮಳೆಯಿಂದ ನೀರು ತುಂಬಿ ಮನೆಯ ಫರ್ನಿಚರ್, ದುಬಾರಿ ಐಟೆಮ್ಸ್ ಹಾಳಾಗಿದೆ.
ರಾತ್ರಿ ಸುರಿದ ಮಳೆಗೆ ಕಾರು ಶೋರೂಂಗೆ ಮಳೆ ನೀರು ನುಗ್ಗಿದೆ. ಮೈಸೂರು ರಸ್ತೆಯ ಜಯರಾಮ ವೃತ್ತದ ಬಳಿ ಘಟನೆ ನಡೆದಿದೆ. ರಸ್ತೆ ತುಂಬ ಭಾರಿ ಪ್ರಮಾಣದ ಮಳೆ ನೀರು ನಿಂತಿದೆ. ರಸ್ತೆ ಮತ್ತು ಪಕ್ಕದಲ್ಲಿರುವ ಕಾರುಗಳು ನೀರಿನಲ್ಲಿ ಜಲಾವೃತಗೊಂಡಿವೆ.
ಕೆಂಗೇರಿ, ಆರ್.ಆರ್ ನಗರ ಸುತ್ತಮುತ್ತ ಜೋರು ಮಳೆಯಾಗಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಹಳ್ಳಿ ಭಾಗದಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಮನೆಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಬೆಳ್ಳಂಬೆಳಗ್ಗೆ ಎಲೆಕ್ಟ್ರಾನ್ ಸಿಟಿ ಫ್ಲೈಓವರ್ ಜಾಮ್ ಆಗಿತ್ತು. ಮಳೆ ಪರಿಣಾಮ ಸುಮಾರು ಐದು ಕಿಲೋಮೀಟರ್‌ಗೂ ಹೆಚ್ಚು ವಾಹನ ದಟ್ಟಣೆ ಕಂಡುಬAತು.