ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸೂರ್ಯನ ಸುತ್ತ ಕಾಮನಬಿಲ್ಲು ಕಾಣಿಸಿಕೊಂಡಿದೆ.
ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡ ಈ ರಿಂಗ್ ಒಂದೂವರೆ ಗಂಟೆ ಕಾಲ ಇತ್ತು. ಸೂರ್ಯನ ಸುತ್ತ ರಿಂಗ್ ಕಾಣಿಸಿಕೊಂಡ ಫೋಟೋ, ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗುತ್ತಿದೆ. ಶಾಲಾ ಮಕ್ಕಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರು ಅಲ್ಲಲ್ಲಿ ನಿಂತು ಖಗೋಳ ಕೌತುಕ ಕಣ್ತುಂಬಿಕೊಂಡರು.
Advertisement
Advertisement
ಅಲ್ಲದೇ ಈ ರಿಂಗ್ ನೋಡಿ ಏನೋ ಆಪತ್ತು ಕಾದಿದೆ, ಸಿಕ್ಕಾಪಟ್ಟೆ ಮಳೆ ಸುರಿಯಲಿದೆ ಎಂದು ವಿಶ್ಲೇಷಣೆಗಳು ಈಗ ಆರಂಭವಾಗಿದೆ. ವೈಜ್ಞಾನಿಕವಾಗಿ 22 ಡಿಗ್ರಿ ಹ್ಯಾಲೋ ಎಂದು ಕರೆಯಲಾಗುವ ಇದು ಖಗೋಳದ ಸಾಮಾನ್ಯ ಪ್ರಕ್ರಿಯೆ. ನೆಲದಿಂದ ಸುಮಾರು 2 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಈ ವೃತ್ತಕಾರ ಕಾಣಿಸಿಕೊಳ್ಳುತ್ತದೆ.
Advertisement
Advertisement
ಅಲ್ಲಿ ತೇವಾಂಶ ಹೆಚ್ಚಾಗಿ ನೀರಿನ ಶೈತ್ಯೀಕರಣದಿಂದ ಮಂಜು ಹರಳುಗಟ್ಟುತ್ತದೆ. ಈ ಪ್ರದೇಶವನ್ನು ಸೂರ್ಯನ ಕಿರಣಗಳು ಹಾದು ಬರುವಾಗ ಬೆಳಕಿನ ವಕ್ರೀಭವನ, ಬೆಳಕಿನ ಪ್ರತಿಫಲನ ಹಾಗೂ ಬೆಳಕಿನ ಚದುರುವಿಕೆ ನಡೆದು ವೃತ್ತಾಕಾರದ ಕಾಮಬಿಲ್ಲು ಕಾಣಿಸುತ್ತದೆ. ಒಟ್ಟಾರೆಯಾಗಿ ಖಗೋಳದ ವಿದ್ಯಾಮಾನ ಶಿವಮೊಗ್ಗ ಜನರಲ್ಲಿ ವಿಸ್ಮಯ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv