ಬೆಂಗಳೂರು: ಇನ್ನೆರಡು ದಿನಗಳ ಕಾಲ ಆಫೀಸ್ ಅಥವಾ ಹೊರಗಡೆ ಹೋಗುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಇನ್ನರೆಡು ದಿನಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಕೇಂದ್ರ ಗೃಹ ಇಲಾಖೆ ಇಂದಿನಿಂದ 13 ರಾಜ್ಯಗಳು ಸೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ಕೂಡ ನೀಡಿದೆ.
ದೆಹಲಿ ಸೇರಿದಂತೆ ಉತ್ತರಪ್ರದೇಶದ ಪಶ್ಚಿಮ ಭಾಗಗಳಲ್ಲಿ ಎರಡು ಗಂಟೆಗಳ ಕಾಲ ಸಿಡಿಲು ಸಹಿತ ಮಳೆಯಾಗಲಿದ್ದು, ಹರಿಯಾಣದಲ್ಲಿ ಮಂಗಳವಾರದವರೆಗೆ ಶಾಲೆ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ 5 ರಾಜ್ಯಗಳಲ್ಲಿ ಸುರಿದ ಮಳೆ, ಗಾಳಿಗೆ 124 ಮಂದಿ ಸಾವನ್ನಪ್ಪಿದ್ದು, 300 ಮಂದಿ ಗಾಯಗೊಂಡಿದ್ದಾರೆ.