ಬೆಂಗಳೂರು: ಅಕಾಲಿಕ ಮಳೆಯಿಂದ ಸದ್ಯಕ್ಕೆ ರಾಜ್ಯಕ್ಕೆ ವಿರಾಮ ಇಲ್ಲ ಎನ್ನಿಸುತ್ತಿದೆ. ಇಂದಿನಿಂದ ಮತ್ತೆ ಕೆಲವು ದಿನ ರಾಜ್ಯದಲ್ಲಿ ಧಾರಾಕಾರ ಮಳೆ ಆಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
Advertisement
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಬ್ಬರಿಸುವ ನಿರೀಕ್ಷೆ ಇದೆ. ರಾಜಧಾನಿ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲೂ ಇಂದಿನಿಂದ ಮತ್ತೆ ಕೆಲವು ದಿನ ಮಳೆ ಆಗಬಹುದು. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ. ಆದರೆ ಹವಾಮಾನ ಇಲಾಖೆ ಅಧಿಕೃತವಾಗಿ ಮಳೆಯ ಮುನ್ನೆಚ್ಚರಿಕೆ ನೀಡಿಲ್ಲ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ
Advertisement
Advertisement
ಈ ನಡುವೆ ನವೆಂಬರ್ 26ರಿಂದ ಚಂಡಮಾರುತ ಮಳೆ ಆಗಲಿದ್ದು, ನವೆಂಬರ್ 29ರವರೆಗೂ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಚಿಂತಾಮಣಿ ತಾಲೂಕಿನಲ್ಲಿ ವಾಡಿಕೆಯಿಂದ ಎರಡು ಪಟ್ಟು ಅಂದರೆ 1,500 ಮಿಲಿ ಮೀಟರ್ ಮಳೆ ಆಗಿದೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಲ್ಲಿ ನವೆಂಬರ್ ತಿಂಗಳಲ್ಲಿ ವಾಡಿಕೆಯ 60 ಮಿಲಿ ಮೀಟರ್ ಮಳೆಗಿಂತ 300 ಮಿಲಿ ಮೀಟರ್ ಮಳೆ ಆಗಿದೆ.
Advertisement
ಇನ್ನೂ ಪ್ರವಾಹದಿಂದ ತತ್ತರಿಸಿರುವ ತಮಿಳುನಾಡು ಮತ್ತು ಆಂಧ್ರದಲ್ಲಿ ಮತ್ತೆ ರಣ ಮಳೆ ಎಚ್ಚರಿಕೆ ನೀಡಲಾಗಿದೆ. ನವೆಂಬರ್ 26ರವರೆಗೂ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಮಾಹೆಯಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ
ಬೆಂಗಳೂರಿನಲ್ಲಿ ಸೋಮವಾರ ಮಳೆ ಇರಲಿಲ್ಲ. ಆದರೆ ಅಮಾನಿಕೆರೆ ಪ್ರವಾಹದಿಂದ ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್ ಜಲಾವೃತಗೊಂಡಿದ್ದು, ಇನ್ನೂ ನೀರು ಸಂಪೂರ್ಣವಾಗಿ ಇಳಿದಿಲ್ಲ. ಅಮಾನಿಕೆರೆಯಿಂದ ನೀರು ಇನ್ನೂ ಅಪಾರ್ಟ್‍ಮೆಂಟ್‍ನತ್ತ ಬರುತ್ತಲೇ ಇದೆ. 600 ಪ್ಲ್ಯಾಟ್‍ನಲ್ಲಿರುವ ನಿವಾಸಿಗಳು ದೋಣಿಗಳ ಮೂಲಕ ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ.