ಹಾವೇರಿ: ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದೆ. ಜಿಲ್ಲೆಗಳಲ್ಲಿರುವ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದ್ದು, ರಾಣೆಬೆನ್ನೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಬಳಿ ಟಾಟಾ ಏಸ್ ವಾಹನವೊಂದು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.
Advertisement
ಗ್ರಾಮದ ಬಳಿ ಇರುವ ಹಳ್ಳದ ಪಕ್ಕ ಚಿಕ್ಕಹರಳಹಳ್ಳಿ ಗ್ರಾಮದ ಗುಡ್ಡಪ್ಪ ತಮ್ಮ ಟಾಟಾ ಏಸ್ ವಾಹನನ್ನು ನಿಲ್ಲಿಸಿದ್ದ ವೇಳೆ ಏಕಾಏಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕಳೆದೆರಡು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವ ಪರಿಣಾಮ ಹಳ್ಳದ ನೀರು ರಭಸವಾಗಿ ಹರಿಯುತ್ತಿತ್ತು. ಇದನ್ನೂ ಓದಿ: ಬಿಟ್‍ಕಾಯಿನ್ ಹಗರಣ – ರಾಕೇಶ್ ಸಿದ್ದರಾಮಯ್ಯ ಹೆಸರು ಎಳೆದು ತಂದ ಬಿಜೆಪಿ
Advertisement
Advertisement
ವಾಹನ ನಿಲ್ಲಿಸಿ ಚಾಲಕ ಕೆಳಗೆ ಇಳಿದಿದ್ದರಿಂದ ಬಚಾವ್ ಆಗಿದ್ದಾರೆ. ವಾಹನದ ಮೇಲ್ಭಾಗ ಮಾತ್ರ ಕಾಣುವಂತೆ ಹಳ್ಳದ ನೀರಿನಲ್ಲಿ ಟಾಟಾ ಏಸ್ ವಾಹನ ಮುಳುಗಿದ್ದು, ವಾಹನವನ್ನು ಮೇಲೆ ಎತ್ತಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ