– ಕೃಷ್ಣನಗರಿಯಲ್ಲಿ ಆರೆಂಜ್ ಅಲರ್ಟ್
ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ನದಿಗಳು ಮೈದುಂಬಿ ಹರಿಯುತ್ತದೆ. ಪರಿಣಾಮ ಜಮೀನುಗಳು ಜಲಾವೃತಗೊಂಡಿವೆ. ಇತ್ತ ಕೃಷ್ಣ ನಗರಿ ಉಡುಪಿಯಲ್ಲಿ ಆರೆಂಜ್ ಅಲರ್ಟ್ (Orange Alert In Udupi) ಘೋಷಿಸಲಾಗಿದೆ.
ದಕ್ಷಿಣ ಕನ್ನಡ (Rain In Dakshina Kannada) ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯ ನದಿಗಳು ಜೀವಕಳೆ ಪಡೆದಿವೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು (Kateel Shri Durgaparameshwari Temple) ನಂದಿನಿ ನದಿ ಆವರಿಸಿದ ದೃಶ್ಯ ಮನಮೋಹಕವಾಗಿದೆ. ನಂದಿನಿ ನದಿಯ ಅಬ್ಬರದ ಹರಿವಿನ ದೃಶ್ಯವು ಛಾಯಾಗ್ರಾಹಕ ನವೀನ್ ಕಟೀಲ್ ಅವರ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ನಂದಿನಿ ನದಿ (nandini River) ಜೂನ್ ತಿಂಗಳಿನಲ್ಲಿ ಸಂಪೂರ್ಣ ಬರಿದಾಗಿತ್ತು. ಜುಲೈ ತಿಂಗಳ ಮಳೆಗೆ ಮೈ ತುಂಬಿ ಹರಿದಿದೆ. ನಂದಿನಿ ನದಿಗೂ ಕಟೀಲು ಕ್ಷೇತ್ರಕ್ಕೂ ಪೌರಾಣಿಕ ನಂಟು ಇದೆ. ನಂದಿನಿ ನದಿ ಮಧ್ಯೆಯೇ ಶ್ರೀ ದುರ್ಗೆ ಉದ್ಭವಿಸಿದ್ದಾಳೆ. ಹೀಗಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಂದಿನಿ ನದಿಯ ಮಧ್ಯದಲ್ಲಿ ಇದ್ದು, ಇದೀಗ ಈ ನಂದಿನಿ ನದಿ ಭಕ್ತರ ಕಣ್ಮನ ಸೆಳೆಯುತ್ತಿದೆ.
ಮಂಗಳೂರಿನಲ್ಲಿ ಮಳೆಯ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಕಡಲ ತೀರಗಳಲ್ಲಿ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿ ಆರಂಭಗೊಂಡಿದೆ. ಮಂಗಳೂರಿನ ಬೈಕಂಪಾಡಿ, ಮೀನಕಳಿಯ, ಪಣಂಬೂರು ಬೀಚ್ ಗಳಲ್ಲಿ ಮರಳು ಚೀಲಗಳ ಅಳವಡಿಕೆಯ ತುರ್ತು ಕಾಮಗಾರಿ ಆರಂಭಗೊಂಡಿದೆ. ಮೀನಕಳಿಯ ಕಡಲ ತೀರದಲ್ಲಿ ಹತ್ತಕ್ಕೂ ಅಧಿಕ ಮನೆಗಳು ಸಮುದ್ರ ಪಾಲಾಗುವ ಅಪಾಯದಲ್ಲಿದ್ದು, ಸದ್ಯ ಜೆಸಿಬಿ ಮೂಲಕ ಜಂಬೋ ಬ್ಯಾಗ್ ಗಳಿಗೆ ಮರಳು ತುಂಬಿಸಿ ದಡದಲ್ಲಿ ಇರಿಸಲಾಗುತ್ತಿದೆ. ಇದರಿಂದಾಗಿ ತಾತ್ಕಾಲಿಕವಾಗಿ ಕಡಲ್ಕೊರೆತ ತಡೆಯಬಹುದಾಗಿದೆ. ಇದನ್ನೂ ಓದಿ: ಕಿಕ್‍ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ- 170 ಇದ್ದ ಕಿಂಗ್‍ಫಿಷರ್ ಬೆಲೆ 190 ರೂ.ಗೆ ಏರಿಕೆ!
ಅಪಾಯದಲ್ಲಿರುವ ಮನೆಗಳ ತುರ್ತು ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ಸಮುದ್ರದ ಅಲೆಗಳ ಅಬ್ಬರ ಏರಿಳಿತ ಗಮನಿಸಿ ತುರ್ತು ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು ಹತ್ತಕ್ಕೂ ಅಧಿಕ ಮನೆಗಳಿಗೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ತಾತ್ಕಾಲಿಕವಾಗಿ ಅಳವಡಿಸಿದ್ದ ಸಣ್ಣ ಸ್ಯಾಂಡ್ ಬ್ಯಾಗ್ ಗಳು ಸಮುದ್ರ ಪಾಲಾಗುತ್ತಿವೆ. ಹೀಗಾಗಿ ಮತ್ತಷ್ಟು ಬಲಿಷ್ಠವಾದ ಜಂಬೋ ಸ್ಯಾಂಡ್ ಬ್ಯಾಗ್ ಗಳ ಜೋಡಣೆ ಕಾರ್ಯ ನಡೆಯುತ್ತಿದೆ.
ಇತ್ತ ಉಡುಪಿ (Rain In Udupi) ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬಿದ್ದಿರುವುದು ಕಾಪು ತಾಲೂಕಿನಲ್ಲಿ. ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಕಡಲು ಕೊರೆತ ವಿಪರೀತವಾಗಿದೆ. ಒಂದು ಕಡೆ ನದಿ ಒಂದು ಕಡೆ ಕಡಲ್ಕೊರೆತದ ನಡುವೆ ಜನ ಸಿಲುಕಿದ್ದಾರೆ. ಪಡುಹಿತ್ಲು ಜಾರಂದಾಯ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದ್ದು ನೂರಾರು ಎಕ್ರೆ ಗದ್ದೆ ಜಲಾವೃತವಾಗಿದೆ. ಸುತ್ತಮುತ್ತಲ ಹತ್ತಾರು ಮನೆಗಳಿಗೆ ಜಲದಿಗ್ಬಂಧನವಾಗಿದೆ. ಜಿಲ್ಲೆಯಾದ್ಯಂತ ಮುಂಜಾನೆಯಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸಂಪೂರ್ಣ ಕಾರ್ಮೋಡ ಮುಸುಕಿದ ವಾತಾವರಣವಿದೆ. ಮುಂದಿನ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]