ನವದೆಹಲಿ: ಉತ್ತರಾಖಂಡ (Uttarakhand) ಮತ್ತು ದೆಹಲಿಯಲ್ಲಿ (Delhi Rain) ಮಳೆಯಾಗುತ್ತಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಅಲ್ಲದೇ, ಪಶ್ಚಿಮ ಹಿಮಾಲಯದಲ್ಲಿ ಹಿಮಪಾತ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇಂದು ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಸಾಕಷ್ಟು ವ್ಯಾಪಕವಾದ ಮಳೆ ಮತ್ತು ಹಿಮಪಾತ ಸಂಭವಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್ ಬೆಂಬಲಿಸಿ ಪಾಕ್ ಪ್ರಧಾನಿ ಷರೀಫ್ ವಿರುದ್ಧ ಗುಡುಗಿದ್ದ ಮೋದಿ
Advertisement
Advertisement
ಇಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ, ಮಧ್ಯ ಮಹಾರಾಷ್ಟ್ರ, ಮರಾಠವಾಡದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಚದುರಿದ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.
Advertisement
ಮುಂದಿನ 3 ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಸುಮಾರು 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ಕ್ರಮೇಣ 2-3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಲಿದೆ ಎಂದು ಐಎಂಡಿ ಹೇಳಿದೆ. ಇದನ್ನೂ ಓದಿ: ಕೊನೆಯ 30 ನಿಮಿಷ ಆಟ| 11 ರನ್ ಅಂತರದಲ್ಲಿ 3 ವಿಕೆಟ್ ಪತನ – ಸಂಕಷ್ಟದಲ್ಲಿ ಭಾರತ
Advertisement
ಮಧ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯನ್ನು ಊಹಿಸಲಾಗಿಲ್ಲ. ಆದರೆ ನಂತರ 2-4 °C ರಷ್ಟು ಕುಸಿತ ಸಂಭವಿಸುತ್ತದೆ. ಡಿ.29 ಮತ್ತು 30 ರಂದು ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್‌ನ ಕೆಲವು ಭಾಗಗಳಲ್ಲಿ ಶೀತ ಅಲೆಯಿಂದ ತೀವ್ರ ಶೀತ ಅಲೆಗಳ ಪರಿಸ್ಥಿತಿ ಇರಲಿದೆ.