ಬೆಂಗಳೂರು: ಮಳೆ ಸೃಷ್ಟಿಸುತ್ತಿರುವ ಅವಾಂತರಗಳನ್ನು ತಡೆಯಲು ಬೆಂಗಳೂರಿನ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದ್ದಾರೆ.
Advertisement
ಕಳೆದ 15 ದಿನಗಳಿಂದ ಮಳೆ ಪ್ರತಿನಿತ್ಯ ಒಂದಲ್ಲೊಂದು ಅವಾಂತರಗಳನ್ನು ಸೃಷ್ಟಿ ಮಾಡುತ್ತಿದೆ. ಬೊಮ್ಮನಹಳ್ಳಿಯ ಸುತ್ತಮುತ್ತ ಅನೇಕ ಸಮಸ್ಯೆಗಳು ಉಂಟಾಗಿದೆ ಇದನ್ನು ತಡೆಯಲು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಇಂದು ನಗರದ ಎಚ್‍ಎಸ್‍ಆರ್ ಬಡಾವಣೆ ಬಿಡಿಎ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಟಾಸ್ಕ್ ಫೋರ್ಸ್ ಗೆ ಚಾಲನೆ ನೀಡಲಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ಚಳಿಗಾಲವೋ..? ಮಳೆಗಾಲವೋ..?- ಮಳೆಗಾಲ ಮುಗಿದ್ರೂ ತಗ್ಗದ ವರುಣಾರ್ಭಟ
Advertisement
Advertisement
ಟಾಸ್ಕ್ ಫೋರ್ಸ್ ನಲ್ಲಿ 6 ಮಂದಿ ಬಿಬಿಎಂಪಿ ಸಿಬ್ಬಂದಿ 60 ಮಂದಿ ಸಿವಿಲ್ ಡಿಫೆನ್ಸ್ ಸಿಬ್ಬಂದಿ, 40 ಮಂದಿ ಹೋಂಗಾರ್ಡ್‍ಗಳು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬೆಸ್ಕಾಮ್ ಅಧಿಕಾರಿಗಳು ಎಲ್ಲರೂ ಸಹ ಕಾರ್ಯಪ್ರವೃತ್ತರಾಗಿದ್ದಾರೆ ಮೂರು ಶಿಫ್ಟ್ ಗಳಲ್ಲಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದ್ದು ಮಳೆ ಸಂಪೂರ್ಣವಾಗಿ ನಿಲ್ಲುವವರೆಗೆ ಈ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದೆ ಮಳೆ ಸಮಯದಲ್ಲಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವ ಸಿಬ್ಬಂದಿ ಯಾವುದೇ ಸಮಯದಲ್ಲಾದರೂ ಸಹ ಸ್ಥಳಕ್ಕೆ ತಲುಪುವಂತಹ ಎಲ್ಲಾ ಸಿದ್ಧತೆಗಳು ಹಾಗೂ ಕ್ರಮಗಳು ಮೊದಲೇ ತೆಗೆದುಕೊಂಡು ಸಿದ್ಧರಿರುತ್ತಾರೆ ಎಂದು ಸತೀಶ್ ರೆಡ್ಡಿ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ
Advertisement