ಬೆಂಗಳೂರು (Bangalore) ಮಳೆ (Rain) ಆವಾಂತರ ಅನೇಕರನ್ನು ನಾನಾ ರೀತಿಯಲ್ಲಿ ಕಾಡಿದೆ. ಸ್ಯಾಂಡಲ್ ವುಡ್ ನಿರ್ದೇಶಕ ಶಶಾಂಕ್ ತಮಗಾದ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಶಶಾಂಕ್ (Shashank) ಅವರ ಆಫೀಸು ಇದ್ದು, ಆಫೀಸ್ ಪಕ್ಕದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಉರುಳಿದ ಬಿದ್ದಿದೆ. ಅದರಿಂದಾಗಿ ಕರೆಂಟೂ ಇಲ್ಲ, ನೀರು ಇಲ್ಲವೆಂದು ಫೋಟೋ ಸಮೇತ ಬರೆದುಕೊಂಡಿದ್ದಾರೆ.
ನಿನ್ನೆಯಿಂದಲೇ ಬಿಬಿಎಂಪಿ ಸಿಬ್ಬಂದಿಗೆ ಹಾಗೂ ಬೆಸ್ಕಾಂ ಸಿಬ್ಬಂದಿ ಕರೆ ಮಾಡಿದರೂ, ಈವರೆಗೂ ಅವರಿಂದ ಯಾವುದೇ ಸ್ಪಂದನೆ ಇಲ್ಲ ಎನ್ನುವುದನ್ನು ಶಶಾಂಕ್ ಹೇಳಿಕೊಂಡಿದ್ದಾರೆ. ಕಾರಿನ ಮೇಲೆ ಮರ ಬಿದ್ದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಿಬಿಎಂಪಿ ಹಾಗೂ ಬೆಸ್ಕಾಂ ಸಿಬ್ಬಂದಿ ಇನ್ನೂ ಬಂದಿಲ್ಲವೆಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಬಿಜೆಪಿ ರಾಜ್ಯಸಭಾ ಸದಸ್ಯ- ನಟ ಜಗ್ಗೇಶ್ (Jaggesh) ಅವರಿಗೂ ಮಳೆಯ ಅವಾಂತರದ ಬಿಸಿ ತಟ್ಟಿದೆ. ನಿನ್ನೆ ಸುರಿದ ಮಳೆಯಿಂದ ಜಗ್ಗೇಶ್ ಅವರ ಕಾರು ಮುಳುಗಡೆ ಆಗಿದೆ. ಜಗ್ಗೇಶ್ ಅವರ ಮನೆಯ ರಿಪೇರಿ ಕೆಲಸ ಕಾರ್ಯಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ತಮ್ಮ BMW ಕಾರನ್ನು ಸ್ನೇಹಿತ ಮುರುಳಿ ಮನೆ ಬಳಿ ನಿಲ್ಲಿಸಿದ್ದರು.
ಮಳೆ ತಂದ ಸಂಕಷ್ಟದಿಂದ ಮುರಳಿ ಅವರ ಮನೆ- ಪಾರ್ಕಿಂಗ್‌ಗೆ ನೀರು ನುಗ್ಗಿದೆ. ಈ ಪರಿಣಾಮ ಜಗ್ಗೇಶ್ ಅವರ BMW ಕಾರು ಮುಳುಗಡೆಯಾಗಿದೆ. ಕೊನೆಗೂ ಹೇಗೋ ಸ್ನೇಹಿತ ಮುರಳಿ ಅವರು ಪಂಪ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರು ನಿನ್ನೆ ಸುರಿದ ಭಾರೀ ಮಳೆಯಿಂದ ಹತ್ತು ಅಲವು ಅನಾಹುತ ಸೃಷ್ಟಿಸಿದೆ.