ಚಾಮರಾಜನಗರ/ಮಂಗಳೂರು: ಬೇಸಿಗೆಯ ಸುಡು ಬಿಸಿಲಿನಲ್ಲಿ ಕಂಗೆಟ್ಟಿದ್ದ ಗಡಿ ಜಿಲ್ಲೆಯ ಜನರಿಗೆ ಮಳೆರಾಯ ಇಂದು ತಂಪೆರದಿದ್ದಾನೆ.
ಜಿಲ್ಲೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಚಾಮರಾಜನಗರ, ಬಂಡಿಪುರ, ಕೊಳ್ಳೇಗಾಲ ಹಾಗೂ ಮಲೆಮಹದೇಶ್ವರ ಬೆಟ್ಟದ ಭಾಗಗಳಲ್ಲಿ ಮಳೆ ಸುರಿದಿದೆ. ಅದರಲ್ಲೂ ಬಂಡೀಪುರ ಭಾಗಗಕ್ಕೆ ಹೆಚ್ಚು ಮಳೆಯಾಗಿದೆ.
Advertisement
Advertisement
ಮಳೆಯಿಂದ ಕಾಡಿನಲ್ಲಿ ನೀರಿಲ್ಲದೇ ಹಾಗೂ ಆಹಾರ ಸಿಗದೇ ಕಂಗಾಲಾಗಿದ್ದ ಪ್ರಾಣಿಗಳು ನಿಟ್ಟುಸಿರು ಬಿಟ್ಟಿವೆ. ಇತ್ತೀಚೆಗೆ ವಾಯುಭಾರ ಕುಸಿತದಿಂದ ಕೇರಳದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದು, ಮಂಗಳೂರಿನ ಕಡಲ ಕಿನಾರೆಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.
Advertisement
ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಕಡಲ ಕಿನಾರೆಯಲ್ಲಿ ನಿಗಾ ಇಟ್ಟಿದ್ದು, ಮೀನುಗಾರಿಕೆಗೆ ತೆರಳಿರುವವರನ್ನು ಹಿಂದಿರುಗಲು ಸೂಚಿಸಿದ್ದಾರೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರೋ ತನಕ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಇವತ್ತು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.