ರಾಮನಗರ: ಕೆಲವು ದಿನಗಳಿಂದ ಮಳೆರಾಯ ತಂಪಾಗಿದ್ದನು. ಆದರೆ ಈಗ ವರುಣ ತಮ್ಮ ಆರ್ಭಟವನ್ನು ಮತ್ತೆ ಶುರು ಮಾಡಿದ್ದಾನೆ.
ಚನ್ನಪಟ್ಟಣದಲ್ಲಿ ಶುಕ್ರವಾರ ಸಾಯಂಕಾಲದ ವೇಳೆ ಸುರಿದ ಭಾರೀ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ನಗರದಲ್ಲಿ ಅರ್ಧಗಂಟೆ ಕಾಲ ಜೋರು ಗಾಳಿ ಸಹಿತ ಮಳೆಯಾಗಿದೆ. ಭಾರೀ ಮಳೆಯಿಂದ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಸರ್ಕಾರಿ ಬಸ್ ನಿಲ್ದಾಣಕ್ಕೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಕೆಲ ಕಾಲ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
ಮಳೆಯಿಂದ ಬಸ್ ನಿಲ್ದಾಣದ ಒಳಗೆ ನೀರು ತುಂಬಿದ್ದು, ಮಳೆಯ ನೀರನ್ನು ಹೊರಹಾಕಲು ನಿಲ್ದಾಣದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಬಸ್ ನಿಲ್ದಾಣದಲ್ಲಿ ತುಂಬಿದ್ದ ನೀರನ್ನು ಹೊರ ಹಾಕಲು ಸಿಬ್ಬಂದಿ ಬಿಂದಿದೆ ಮತ್ತು ಬಕೆಟ್ ಗಳನ್ನ ಹಿಡಿದುಕೊಂಡು ನೀರನ್ನು ಹೊರ ಹಾಕುವ ಕೆಲಸ ಮಾಡಿದ್ದಾರೆ.
Advertisement
Advertisement
ಇತ್ತೀಚೆಗೆ ರಾಜಾದ್ಯಂತ ಗಾಳಿ ಸಹಿತ ಮಳೆಯಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲ ಜಲಪಾತಗಳು, ನದಿಗಳು ತುಂಬಿವೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೋಡಿದೆ. ಆದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಅಪಾರ ಹಾನಿ ಉಂಟಾಗಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿತ್ತು.
Advertisement