ಡೆಹ್ರಾಡೂನ್: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಹಿಮಪಾತವಾಗುವ (Snowfall) ಸಾಧ್ಯತೆಯ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ಕೇದಾರನಾಥ (Kedarnath) ಯಾತ್ರಾರ್ಥಿಗಳಿಗೆ (Pilgrims) ತಿಳಿಸಲಾಗಿದೆ.
ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಅದೇ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದರು.
ಕೇದಾರನಾಥ ಧಾಮದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದೆ. ಸೋನ್‌ಪ್ರಯಾಗದಿಂದ ಬೆಳಗ್ಗೆ 10:30ರ ಬಳಿಕ ಕೇದಾರನಾಥಕ್ಕೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.
ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಇದನ್ನೂ ಓದಿ: ಬೊಂಬಾಟ್ ಬೌಲಿಂಗ್, ಮ್ಯಾಜಿಕ್ ಫೀಲ್ಡಿಂಗ್ – RCBಗೆ 18 ರನ್‌ಗಳ ಭರ್ಜರಿ ಜಯ