ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
Advertisement
ರಾತ್ರಿ ಸುರಿದ ಮಳೆಗೆ ನಗರದ ಹಲವು ಕಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಗಂಟೆಗಟ್ಟಲೇ ಸುರಿದ ಮಳೆಯಿಂದಾಗಿ ಜನರು ರಾತ್ರಿ ಪೂರ್ತಿ ನಿದ್ರೆ ಇಲ್ಲದೇ ಜಾಗರಣೆ ಮಾಡಿದ್ದಾರೆ. ಅಲ್ಲದೇ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಸಾಮಾನುಗಳೆಲ್ಲ ನೀರು ಪಾಲಾಗಿದೆ ಎಂದು ಜನ ಕಣ್ಣೀರು ಹಾಕಿದ್ದಾರೆ.
Advertisement
Advertisement
ನಗರದ ಪ್ರಮುಖ ರಸ್ತೆಗಳಾದ ಹೆಬ್ಬಾಳ, ಮಲ್ಲೇಶ್ವರಂನಲ್ಲಿ ಮರ ಬಿದ್ದು ಕಾರುಗಳು ಜಖಂ ಆಗಿದೆ. ಅಲ್ಲದೇ ಹೆಚ್‍ಎಎಲ್ ಬಳಿಯ ರಮೇಶ್ ನಗರದಲ್ಲಿ ಗೋಡೆ ಕುಸಿತಗೊಂಡಿದೆ. ಜೊತೆಗೆ ಆಟೋ, ಬೈಕ್, ಕಾರು ಸೇರಿ ಹತ್ತಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಕೋಲ್ಕತ್ತಾಗೆ 6 ವಿಕೆಟ್ ಜಯ – ಪ್ಲೇ ಆಫ್ ಕನಸು ಜೀವಂತ
Advertisement
ಒಟ್ಟಾರೆ ದಿಢೀರ್ ಮಳೆಯಬ್ಬರಕ್ಕೆ ರಾಜಧಾನಿ ಜನರಿಗೆ ದಂಗು ಬಡಿದಂತಾಗಿದೆ. ಅಕ್ಟೋಬರ್ 8ರವರೆಗೂ ಮಳೆಯಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: 20 ವರ್ಷ ಸೇನೆಯಲ್ಲಿ ಸೇವೆ- ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಸೈನಿಕ