ಚಾಮರಾಜನಗರ: ತಡವಾಗಿದ್ದಕ್ಕೆ ಆರೋಗ್ಯನೂ ಮುಖ್ಯವಲ್ಲವೇ. ನನಗೆ ಆರೋಗ್ಯ ಸರಿಯಿಲ್ಲದೆ, ಒದ್ದಾಡುತ್ತಿದ್ದೇನೆ. 4-5 ದಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಎರಡು ದಿನ ತಡವಾಗಿದೆ ಎಂದು ಸಚಿವ ವಿ. ಸೋಮಣ್ಣ ಸಮಜಾಯಿಷಿ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಹಾನಿಯಾಗಿದ್ದು, ಇದೀಗ ಐದು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಈ ವೇಳೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಗಾಂಭೀರ್ಯತೆ ಅರ್ಥವಾಗಿದೆ ಎಂದರು. ಇದನ್ನೂ ಓದಿ: ಇಂದು ಸಂಜೆಯೊಳಗೆ ಮುದ್ದಹನುಮೇ ಗೌಡ ಕಾಂಗ್ರೆಸ್‍ಗೆ ಗುಡ್‍ಬೈ
Advertisement
Advertisement
ಬೆಂಗಳೂರು ಮಳೆ ಬಗ್ಗೆ ಮಾತನಾಡಿದ ಸಚಿವರು, ಮಳೆಯಿಂದ ಆಗಿರುವ ಅನಾಹುತ ಅಪಾರ. 486 ಮಿಲಿಮೀಟರ್ ಮಳೆಯಾಗಿದೆ. ಈಗ ಆಗಿರುವ ಮಳೆ ಹಿಂದೆಂದೂ ಆಗಿಲ್ಲ. ನಾನು ಬೆಂಗಳೂರನ್ನು 45 ವರ್ಷಗಳಿಂದ ಪ್ರತಿನಿಧಿಸುತ್ತಿದ್ದೇನೆ. ಮಹದೇವಪುರ ಸೇರಿದಂತೆ ಇತರ ಹೊಸ ಬಡಾವಣೆಗಳಲ್ಲಿ ಅನಾಹುತ ಆಗಿದೆ. ಹಳೇ ಬೆಂಗಳೂರಿಗೆ ಏನೂ ಆಗಿಲ್ಲ. ಅಂಡರ್ ಪಾಸ್ ಬಳಿ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ನಿಲ್ಲುತ್ತಾರೆ. ಆಗ ಬೇರೆ ವಾಹನಗಳು ಸಂಚರಿಸಲು ಆಗಲ್ಲ. ಈ ವೇಳೆ ಅಪಘಾತ ಆಗುತ್ತವೆ. ಇದೆಲ್ಲಾ ಆಗಬಾರದು ಅಂತಾ 45 ಕಡೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
Advertisement
Advertisement
ಮೊದಲಿನ 197 ವಾರ್ಡ್‍ಗಳು ಇವತ್ತಿಗೂ ಹೈ ಕ್ಲಾಸ್ ಆಗಿವೆ. ಮುಖ್ಯಮಂತ್ರಿಗಳು ಆಸಕ್ತಿ ವಹಿಸಿ ಕೆಲಸ ಮಾಡ್ತಿದ್ದಾರೆ. 1500 ಕೋಟಿ ರೂಪಾಯಿ ರಸ್ತೆ ರಿಪೇರಿಗೆ ಕೊಟ್ಟಿದ್ದಾರೆ. ಇಂತಹ ಮಳೆ ಯಾವತ್ತೂ ಆಗಿಲ್ಲ. ಇದನ್ನು ಎದುರಿಸುವುದು ನಮ್ಮ ಕರ್ತವ್ಯ. ಇನ್ನು ರಸ್ತೆ ಗುಂಡಿ ಮುಚ್ಚಲು 210 ಕೋಟಿ ಖರ್ಚು ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ಇಷ್ಟು ಮಳೆಯಾದಾಗ ಗುಂಡಿ ಬೀಳುವುದು ಸ್ವಾಭಾವಿಕ. ಎಷ್ಟು ಕೋಟಿ ಖರ್ಚಾಗಿದೆ ಎಂಬ ಮಾಹಿತಿ ನನಗಿಲ್ಲ. ಆದ್ರೆ ಅಧಿಕಾರಿಗಳು ಮೊದಲಿಗಿಂತ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮುರುಘಾ ಶ್ರೀ ಪೋಕ್ಸೋ ಕಾಯ್ದೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಕೆಲವಾರು ವಿಚಾರಗಳಲ್ಲಿ ಏನಾಗಿದೆ, ಎತ್ತ ಆಗಿದೆ ಎಂಬುದರ ಕುರಿತು ಮಾಹಿತಿ ಇದೆ. ಎಲ್ಲವೂ ದುರಂತ, ಸತ್ಯಾಸತ್ಯತೆ ಹೊರಬರಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಕೋರ್ಟ್ ನಲ್ಲಿ ಸ್ಟೆಟಮೆಂಟ್ ಆಗಿದೆ. ಕೋರ್ಟ್ ಅಂಗಳದಲ್ಲಿರುವಾಗ ನಾನು ನೀವು ಮಾತಾಡೊದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾನೂನು ಎಲ್ಲರಿಗೂ ಒಂದೇ ಅದಕ್ಕೆ ತಲೆ ಬಾಗೋಣ, ನಾವು ಮಧ್ಯಸ್ಥಿಕೆ ವಹಿಸಬಾರದು. ಸಮಾಜ ನಿಜ, ಸಮಾಜದಲ್ಲಿ ಎಲ್ಲವೂ ಸರಿ ಇದೆ, ಸರಿ ಇಲ್ಲ ಎಂದು ಹೇಳುವಷ್ಟು ನೀಚ ನಾನಲ್ಲ. ಬಂಧನ ವಿಚಾರವಾಗಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ನ್ಯಾಯಾಧೀಶರು ಸ್ಟೇಟಮೆಂಟ್ ಪಡೆದಿದ್ದಾರೆ. ಸರ್ಕಾರದ ಹಸ್ತಕ್ಷೇಪ ಇಲ್ಲವೇ ಇಲ್ಲ ಎಂದರು.