ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನವೆಂಬರ್ 12ರವರೆಗೂ ಅತಿ ಹೆಚ್ಚು ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು ಹಾಗೂ ಕೋಲಾರದಲ್ಲಿಯೂ ಭಾರೀ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮಳೆಯಾಗಲಿದೆ.
Advertisement
Advertisement
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಇದನ್ನೂ ಓದಿ: ಭೂ ವಿಜ್ಞಾನಿ ಪ್ರತಿಮಾ ಕಗ್ಗೊಲೆ- ಹಂತಕರ ಪತ್ತೆಗೆ 6 ಸ್ಪೆಷಲ್ ತಂಡ ರಚನೆ
Advertisement
Advertisement
ಧರ್ಮಸ್ಥಳ, ಸೋಮವಾರಪೇಟೆ, ಹುಣಸೂರು, ಸಕಲೇಶಪುರ, ಮಂಗಳೂರು, ಬೆಂಗಳೂರು, ಎಚ್ ಎಎಲ್ ವಿಮಾನ ನಿಲ್ದಾಣ, ರಾಮನಗರ, ಬಂಡೀಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಮಡಿಕೇರಿ, ಪುತ್ತೂರು, ಬೆಳ್ತಂಗಡಿ, ಟಿ ನರಸೀಪುರ, ಕಳಸ, ಭಾಗಮಂಡಲ, ಸರಗೂರು, ಕುಣಿಗಲ್, ಗೋಪಾಲ್ ನಗರ, ದೇವನಹಳ್ಳಿ, ಪೊನ್ನಂಪೇಟೆ, ಉಪ್ಪಿನಂಗಡಿ, ಮಾಣಿ, ಮದ್ದೂರು, ರಾಯಲ್ಪಾಡು, ಹೊಸಕೋಟೆ, ದೊಡ್ಡಬಳ್ಳಾಪುರ, ಚಾಮರಾಜನಗರದಲ್ಲಿಯೂ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.