ಬೆಂಗಳೂರು: ರಾಜ್ಯದಲ್ಲಿ ಚಳಿಯ ಅಬ್ಬರದ ನಡುವೆ ಈಗ ಮತ್ತೆ ಮಳೆ (Rain) ಟೆನ್ಷನ್ ಶುರುವಾಗಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (Weather Department) ಮಳೆ ಮುನ್ಸೂಚನೆ ನೀಡಿದೆ.
Advertisement
ರಾಜ್ಯದಲ್ಲಿ ಮತ್ತೆ ಹಿಂಗಾರು ಮಳೆ ಚುರುಕುಗೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ಕಳೆದ ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ವರುಣದೇವ ಮತ್ತೆ ಕಾಡುವ ಸಾಧ್ಯತೆ ಇದೆ. ಕೊರೆವ ಚಳಿ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಇದನ್ನೂ ಓದಿ; ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ನೀಡಿ, ಖುದ್ದು ಸಿಎಂ ಕರೆ ಮಾಡಿದ್ದಾರೆ – ಬಿಜೆಪಿ ಸ್ಪಷ್ಟನೆ
Advertisement
Advertisement
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣ ರಾಜ್ಯದ ಮೇಲೆ ಎಫೆಕ್ಟ್ ಬೀಳಲಿದೆ. ಬೆಂಗಳೂರಿನಲ್ಲಿ ಎರಡು- ಮೂರು ದಿನ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಸೇರಿದಂತೆ ಒಳನಾಡಿನಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿಗೆ ಇದೇ 13, 14, 15ರಂದು ಮಳೆಯಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
ಇನ್ನೂ ಈ ಮಳೆಯ ಎಫೆಕ್ಟ್ ದಕ್ಷಿಣ ಒಳನಾಡಿಗೆ ತುಸು ಹೆಚ್ಚು ಕಾಡುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಾಮರಾಜನಗರ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಜೊತೆಗೆ ಇದೇ ಜಿಲ್ಲೆಗಳಿಗೆ ಮಿಂಚು, ಗುಡುಗಿನ ಎಚ್ಚರಿಕೆ ನೀಡಲಾಗಿದೆ.
ಒಟ್ಟಾರೆ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೆರಡು ಮೂರು ದಿನ ಮಳೆರಾಯ ಕಾಡಲಿದ್ದಾನೆ. ಮನೆಯಿಂದ ಆಚೆ ಓಡಾಡುವವರು ಅಗತ್ಯ ಕ್ರಮ ವಹಿಸಿದ್ರೆ ಸೂಕ್ತ.