ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಉತ್ತಮ ಮಳೆಯಾಗುತಿದ್ದು, ಮುಂಗಾರು ಚುರುಕುಗೊಂಡಿದೆ. ಕರಾವಳಿಯಲ್ಲಿ ಹೆಚ್ಚಿನ ಗಾಳಿ, ಮಳೆಯಾಗುವ ಸೂಚನೆ ನೀಡಿದ ಹವಾಮಾನ ಇಲಾಖೆ, ಜೂನ್ 23 ರಿಂದ್ 25 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ.
ಮಲೆನಾಡು ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಅಂಕೋಲ ಭಾಗದ ವಿಭೂತಿ ಜಲಪಾತಕ್ಕೆ ನೀರಿನ ಪ್ರಮಾಣ ಹೆಚ್ಚಾಗುತಿದ್ದು ಇದೀಗ ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕಳಸ ತಾಲೂಕಿನ ಸೂರಮನೆ ಜಲಪಾತದ ಬಳಿ ಪ್ರವಾಸಿಗರ ಎಣ್ಣೆ ಪಾರ್ಟಿ ಮಾಡಿ ಇತರ ಪ್ರವಾಸಿಗಳಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಇತ್ತ ಹಾವೇರಿಯಲ್ಲಿ ಸಮಪರ್ಕ ಮಳೆಯಾಗದೆ ರೈತರು ಆತಂಕಗೊಳಗಾಗಿದ್ದಾರೆ. ವರುಣನ ಕೃಪೆಗಾಗಿ ಹೂತಿದ್ದ ಶವಗಳನ್ನ ಹೊರ ತೆಗೆದು ಸುಡುವ ವಿಚಿತ್ರ ಆಚರಣೆ ನಡೆಸಿದ್ದಾರೆ. ಚರ್ಮದ ಖಾಯಿಲೆ ಇದ್ದವರು ಮರಣಹೊಂದಿದಾಗ ಅವರ ಪಾರ್ಥಿವ ಶರೀರ ಹೂಳದೆ ಸುಡಬೇಕು. ಒಂದು ವೇಳೆ ಮಣ್ಣಲ್ಲಿ ಹೂತಿದ್ದರೆ ಮಳೆಯಾವುದಿಲ್ಲ ಅನ್ನೋ ನಂಬಿಕೆ ಇದೆ. ಪುನಃ ಅಂತಹ ಶವಗಳನ್ನ ಹೊರತೆಗೆದು ಸುಟ್ಟರೆ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ.
ಹಾವೇರಿ ಜಿಲ್ಲೆಯ ಹಲವೆಡೆ ಇಂತಹ ನಂಬಿಕೆಯಿಂದಾಗಿಯೇ ಈಗಾಗಲೇ ಹೂತಿದ್ದ 8 ರಿಂದ 10 ಶವಗಳನ್ನ ಹೊರ ತೆಗೆದು ಸುಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳಿಗೆ ತೆರಿಗೆ ಇಲ್ಲ- GST ಸಭೆಯಲ್ಲಿ ಮಹತ್ವದ ನಿರ್ಧಾರ