ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ತೀರ ಪ್ರದೇಶದಲ್ಲಿ ಅಕ್ಷರಶಃ ಮಹಾ ನೆರೆಯ ಭೀತಿ ಶುರುವಾಗಿದರೆ.
ಧನ್ನೆಗಾಂವ್ ಜಲಾಶಯದಿಂದ ಸುಮಾರು 40 ರಿಂದ 50 ಸಾವಿರ ಕ್ಯೂಸೆಕ್ಸ್ ನೀರನ್ನು ಮಾಂಜ್ರಾನದಿಗೆ ಬಿಡುಗಡೆ ಮಾಡಲಾಗಿದೆ. ಪರಿಣಾಮ ಮಾಂಜ್ರಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇದನ್ನೂ ಓದಿ: ವಿಜಯಪುರದ ಸಿಂದಗಿಯಲ್ಲಿ ಭೂಕಂಪನ ಅನುಭವ – ಜನರಲ್ಲಿ ಆತಂಕ
Advertisement
Advertisement
ಭಾಲ್ಕಿ ತಾಲೂಕಿನ ಸಾಯಿಗಾಂವ್, ಇಂಚೂರು ಸೇತುವೆ ಸಂಪರ್ಕ ಕಡಿತಗೊಂಡಿದೆ. ಸಾಯಿಗಾಂವ್, ಇಂಚೂರು ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ಕಾರಣ ಸಾಯಿಗಾಂವ್ ಹಾಗೂ ಇಂಚೂರಿನಿಂದ ಹೂಲಸೂರಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂಚೂರು ಸೇತುವೆ ಮೇಲೆ ಹೆಚ್ಚು ನೀರು ಬಂದ ಕಾರಣ ಸೇತುವೆಯ ರಸ್ತೆ ಕೆರೆಯಂತಾಗಿದೆ. ಬೀದರ್ ತಾಲೂಕಿನ ಕಂದಗೊಳ, ಖಾನಾಪೂರ, ಕೌಠಾ ಸೇರಿದಂತೆ ಮಾಂಜ್ರಾ ನದಿ ದಡದಲ್ಲಿನ ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.