– ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗೂ ಯೆಲ್ಲೋ ಅಲರ್ಟ್
– ಕೋಲಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು: ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಫೆಂಗಲ್ (Cyclone Fengal) ಅಬ್ಬರಿಸಿ ಹೈರಾಣಾಗಿಸಿದ್ರೆ, ಇತ್ತ ಬೆಂಗಳೂರಿನಲ್ಲಿ (Bengaluru) ಸೈಲೆಂಟ್ ಆಗೇ ಕಾಟ ಕೊಡ್ತಿದೆ. ಎರಡು ದಿನದಿಂದ ಬಿಸಿಲು ಕಾಣದ ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಮಳೆಯ ಕಾಟ ಎದುರಾಗಲಿದ್ದು, ಮುಂದಿನ ಎರಡ್ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ.
Advertisement
ಫೆಂಗಲ್ ಚಂಡಮಾರುತ ಆಂಧ್ರ, ತಮಿಳುನಾಡು (TamilNadu) ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿ ಅವಾಂತರ ಸೃಷ್ಟಿಸಿದೆ. ಅತ್ತ ಜೋರು ಮಳೆಗಾಳಿಗೆ ಜನ ಕಂಗಾಲಾಗಿದ್ರೆ, ಇತ್ತ ರಾಜ್ಯದಲ್ಲಿ ಫೆಂಗಲ್ ಸೈಲೆಂಟ್ ಎಫೆಕ್ಟ್‌ಗೆ ಹೈರಾಣಾಗಿದ್ದಾರೆ. ಎರಡು ದಿನದಿಂದ ಜಿಟಿ ಜಿಟಿ ಮಳೆ, ಗಾಳಿ, ಚಳಿಗೆ ಬೇಸರಗೊಂಡಿರುವ ಬೆಂಗಳೂರಿಗರಿಗೆ ಮುಂದಿನ ಎರಡ್ಮೂರು ದಿನ ಇದೇ ವಾತವರಣ ಕಾಟ ಕೊಡುವ ಸಾಧ್ಯತೆ ಇದೆ. ಇದನ್ನೂ ಓದಿ: ಇಂದು ಟ್ರೈನಿಂಗ್ ಮುಕ್ತಾಯ.. ನಾಳೆ DySP ಆಗಿ ಚಾರ್ಜ್ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಅಂತ್ಯ
Advertisement
Advertisement
ಹೌದು. ಚಂಡಮಾರುತದ (Cyclone) ಎಫೆಕ್ಟ್ ಮುಂದಿನ ಮೂರ್ನಾಲ್ಕು ದಿನ ರಾಜ್ಯ ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ನಿನ್ನೆಯಿಂದಲೇ ಹಲವೆಡೆ ಮಳೆಯಾಗುತ್ತಿದೆ. ಮುಂದುವರಿದು ಬೆಂಗಳೂರಿನಲ್ಲಿ ನಿನ್ನೆಯಿಂದಲೇ ವರುಣ ಕಾಟ ಆರಂಭವಾಗಿದೆ.
Advertisement
ಬಿಟ್ಟು ಬಿಟ್ಟು ಜಿಟಿ ಜಿಟಿಯಾಗಿ ಸುರಿಯುತ್ತಿರೋ ಮಳೆರಾಯ ಸೋಮವಾರ-ಮಂಗಳವಾರ ಸಹ ಕಾಟ ಕೊಡುವ ಸಾಧ್ಯತೆ ಇದೆ. ವಾರದ ಆರಂಭದ ದಿನವಾಗಿರೋ ಕಾರಣ ಮಳೆಯ ಎಫೆಕ್ಟ್ ನಗರದಲ್ಲಿ ಕೊಂಚ ಹೆಚ್ಚಾಗಿಯೇ ತಟ್ಟುವ ಸಾಧ್ಯತೆ ಇದೆ. ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳಿಗೆ ಮಳೆಯಿಂದ ಸ್ವಲ್ಪ ಎದುರಿಸುವ ಸಾಧ್ಯತೆ ಇದೆ. ಜೊತೆಗೆ ಕನಿಷ್ಠ ಉಷ್ಣಾಂಶ ಬೆಂಗಳೂರು ನಗರದಲ್ಲಿ ಇಳಿಯಾಗಲಿದ್ದು, ದಿನವಿಡೀ ಮೋಡ ಕವಿದ ವಾತವರಣ ಉಂಟಾಗಿ ಚಳಿಯು ಮತ್ತು ಶೀತಗಾಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ
ಇನ್ನೂ ಇದರ ಎಫೆಕ್ಟ್ ಬೆಂಗಳೂರು ಹೊರತುಪಡಿಸಿ ದಕ್ಷಿಣ ಒಳನಾಡು ಜಿಲ್ಲೆಗಳಿಗೂ ತಟ್ಟಲಿದೆ. ಚಾಮರಾಜನಗರ, ಮೈಸೂರು, ಕೊಡಗು, ರಾಮನಗರ ಜಿಲ್ಲೆಗಳಿಗಿಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಕೆಲವೊಮ್ಮೆ ಈ ಜಿಲ್ಲೆಗಳ ಹಲವೆಡೆ ಗುಡುಗು ಮಿಂಚು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ತ.ನಾಡಿನ ಅಣ್ಣಾಮಲೈಯಾರ್ ಬೆಟ್ಟದಲ್ಲಿ ಭೂಕುಸಿತ – ಮಕ್ಕಳು ಸೇರಿ 7 ಮಂದಿ ಸಿಲುಕಿರುವ ಶಂಕೆ
ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಮತ್ತು ಕರಾವಳಿ ಪ್ರದೇಶಗಳಲ್ಲೂ ಕೆಲವು ಕಡೆ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟಾರೆ ಬೆಂಗಳೂರಿಗೂ ಫೆಂಗಲ್ ಎಫೆಕ್ಟ್ ತಟ್ಟುತ್ತಿದ್ದು, ಮುಂದಿನ ಎರಡು ಮೂರು ದಿನ ಇದೆ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.