ಗದಗ: ಸಿಡಿಲು ಬಡಿದು 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ನಡೆದಿದೆ.
Advertisement
ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಬಾರೀ ಮಳೆಯಾಗಿದೆ. ಮಳೆ ಬರುತ್ತಿದ್ದರಿಂದ ಮರದ ಕೆಳಗೆ ಕುರಿಗಳನ್ನು ನಿಲ್ಲಿಸಿದಾಗ ಮರಕ್ಕೆ ಸಿಡಿಲು ಬಡಿದಿದೆ. ರಾಯಪ್ಪ ಪೂಜಾರಿ, ಅಜಿತ್ ಪೂಜಾರಿ ಅವರಿಗೆ ಸೇರಿದ ಕುರಿಗಳು ಹಾನಿಗೊಳಗಾಗಿವೆ. ಕುರಿಗಳ ಸಾವು ಕಂಡು ಕುರಿಗಾಯಿ ಕುಟುಂಬ ಕಣ್ಣೀರಿಡುತ್ತಿದೆ. ಪ್ರಕೃತಿಯ ವಿಕೋಪದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ
Advertisement
Advertisement
ಹಾನಿಯಾದ ಕುರಿಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಸ್ಥಳಿಯರು ಹಾಗೂ ಕುರಿಗಾಯಿ ಕುಟುಂಬ ಮನವಿ ಮಾಡಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಭೇಟಿ ಪರಿಶೀಲನೆ ನಡೆಸಿದರು. ರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.