ಬೆಂಗಳೂರು: ಬೇಸಿಗೆ ಮಳೆಗೆ ಸಿಲಿಕಾನ್ ಸಿಟಿ ಜನ ತತ್ತರಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನಿನ್ನೆ ಜೋರು ಮಳೆಯಾಯ್ತು. ಸಂಜೆ 7 ಗಂಟೆಗೆ ಆರಂಭವಾದ ಮಳೆ ರಾತ್ರಿಯಿಡಿ ಬಿಟ್ಟು ಬಿಡದೇ ಕಾಡಿತ್ತು.
Advertisement
ಸದಾಶಿವನಗರ, ಮೇಕ್ರಿ ಸರ್ಕಲ್, ಲಾಲ್‍ಭಾಗ್ ಸೇರಿದಂತೆ ನಗರದ ಬಹುತೇಕ ಕಡೆ ರಸ್ತೆ ಗುಂಡಿಗಳು ತುಂಬಿ ಹರಿದ್ದರಿಂದ ವಾಹನ ಸವಾರರು ಪರದಾಡಿದ್ರು. ಮಾರ್ಕೆಟ್ ನ ಟಿಪ್ಪು ಪ್ಯಾಲೇಸ್ ಮುಂಭಾಗ ನಿಲ್ಲಿಸಿದ್ದ ಕೆಎಸ್‍ಆರ್ ಟಿಸಿ ಬಸ್ ಮೇಲೆ ಬೃಹತ್ ಉರುಳಿ ಬಿತ್ತು. ಕಂಡೆಕ್ಟರ್, ಡ್ರೈವರ್ ಇಬ್ಬರು ಬಸ್‍ನಲ್ಲಿ ಮಲಗಿದ್ರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಬೆಂಗಳೂರಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗಗಳಲ್ಲೂ ವರುಣ ತಂಪೆರಿದಿದ್ದಾನೆ. ಕೊಪ್ಪಳ, ಹಾವೇರಿ, ದಾವಣೆಗೆರೆಯಲ್ಲಿ ರಾತ್ರಿ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ವಾಹನ ಸವಾರರ ಪರದಾಡಿದ್ರು. ಇನ್ನು ಕೋಲಾರದಲ್ಲೂ ಜಿಟಿಜಿಟಿ ಮಳೆ ಸುರಿದಿದೆ. ರಾಮನಗರದಲ್ಲಿ ಸುರಿದ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇವತ್ತು ನಾಳೆ ಕೂಡ ಮಳೆ ಮುಂದುವರಿಯಲಿದೆ. ಅಕಾಲಿಕ ಮಳೆಯಾದ್ರೂ, ಬಿಸಿಲಿನ ಬೇಗೆಗೆ ಕಾಳ್ಗಿಚ್ಚಿನ ಭಯದಲ್ಲಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.