ಮಡಿಕೇರಿ: ಕೊಡಗಿನಲ್ಲಿ ಸೋಮವಾರ ರಾತ್ರಿಯಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ಆಗಸ್ಟ್ ತಿಂಗಳಲ್ಲಿ ಕೊಂಚ ಮಳೆ ಇಳಿಮುಖಗೊಂಡಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಆಗಸ್ಟ್‍ನಲ್ಲಿ ಸುರಿಯುವ ಮಳೆಯಂತೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಗೋಚರಿಸುತ್ತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್‍ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲು ಕಾಣಿಸುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯಾದ್ಯಂತ ಇನ್ನೂ ಮಳೆ ಸುರಿಯುತ್ತಿರುವುದು ಆತಂಕಕಾರಿಯಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ವರುಣನ ಅಬ್ಬರ- ಹೊನ್ನಾವರದಲ್ಲಿ ದಾಖಲೆ ಮಳೆ
ಈ ಸಮಯದಲ್ಲಿ ಮಳೆ ಸುರಿದು ಶೀತದ ವಾತಾವರಣ ನಿರ್ಮಾಣವಾದರೆ, ಈಗಾಗಲೇ ಮಿಡಿಗಚ್ಚಿರುವ ಕಾಫಿ ಮತ್ತು ಕರಿಮೆಣಸು ಫಸಲು ಉದುರುವ ಸಾಧ್ಯತೆ ಜೊತೆಗೆ ಕೊಳೆ ರೋಗದ ಭಯವೂ ಇಲ್ಲಿನ ಬೆಳೆಗಾರರನ್ನು ಕಾಡತೊಡಗಿದೆ. ಹಾರಂಗಿ ಜಲಾಶಯದ ಒಳ ಹರಿವು 4,294 ಕ್ಯೂಸೆಕ್ ಇದ್ದರೆ ಹೊರ ಹರಿವು 2,899 ಕ್ಯೂಸೆಕ್ ಇದೆ. ಇದನ್ನೂ ಓದಿ: ರಾತ್ರೋ ರಾತ್ರಿ ಡಿಸಿ ಭೇಟಿಯಾದ ಸೋತ MES ಅಭ್ಯರ್ಥಿಗಳು