ಬೆಂಗಳೂರು: ರಾಜ್ಯದ ಜನರು ಇನ್ನೊಂದೆರಡು ದಿನ ಕೈಲಿ ಛತ್ರಿ ಹಿಡ್ಕೊಂಡು ಓಡಾಡೋದೇ ಒಳ್ಳೆಯದು. ಯಾಕಂದ್ರೆ ಇನ್ನೂ ಎರಡು ದಿನ ಮಳೆಯಬ್ಬರ ಜೋರಾಗಿರಲಿದೆ. ಶುಕ್ರವಾರ ಬೆಂಗಳೂರಿನಲ್ಲಿ ಮಳೆಯಾಗಿದ್ದು, ಸಿಲಿಕಾನ್ ಸಿಟಿ ಫುಲ್ ಚಿಲ್ಡ್ ಆಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಗರದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಯಾವಾಗ ಮಳೆ ಬರುತ್ತೆ ಅನ್ನೋದೆ ಗೊತ್ತಾಗುತ್ತಿಲ್ಲ.
ಈಗಾಗಲೇ ಕಳೆದೆರೆಡು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಮಲೆನಾಡಿನಂತೆ ಮೆಟ್ರೋ ನಗರಿ ಫುಲ್ ಕೂಲ್ ಕೂಲ್ ಆಗಿದೆ. ಇದರಿಂದ ಬಿಸಿಲಿನಿಂದ ಬೆಂದಿದ್ದ ಬೆಂಗಳೂರಿಗರು ಫುಲ್ ಖುಷಿಯಾಗಿದ್ದಾರೆ. ಈ ವಾತಾವರಣದಿಂದ ಕೆಮ್ಮು, ನೆಗಡಿ, ಗಂಟಲು ನೋವು ಮತ್ತಿತರ ರೋಗಗಳು ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರನ್ನು ಆವರಿಸುತ್ತವೆ. ಆದಷ್ಟು ಬೆಚ್ಚಗಿನ ವಾತಾವರಣ ಇದ್ರೇ ಯಾವುದೇ ಸಮಸ್ಯೆಯಾಗಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಬೆಂಗಳೂರಷ್ಟೇ ಅಲ್ಲ ಮುಂದಿನ 24 ಗಂಟೆಗಳ ಕಾಲ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮಳೆಗಾಲ ಮುಗಿದು ಚಳಿಗಾಲ ಬಂದಿದೆ. ಮಳೆ ಬರಲ್ಲ ಎಂದುಕೊಂಡು ಹೋದ್ರೊ ನೆನೆದು ಅನಾರೋಗ್ಯಕ್ಕೆ ತುತ್ತಾಗೋದು ಮಾತ್ರ ಗ್ಯಾರೆಂಟಿ. ಹಾಗಾಗಿ ಮನೆಯಿಂದ ಹೊರಗೆ ಬರೋ ಮುನ್ನ ನೆನಪು ಮಾಡಿಕೊಂಡು ಛತ್ರಿ ತಗೆದುಕೊಂಡು ಹೋಗೋದು ಓಳ್ಳೆಯದು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv