ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಜೂನ್ ಮೊದಲ ವಾರಕ್ಕೆ ಕೇರಳ ಮೂಲಕ ಕರಾವಳಿಗೆ ಮುಂಗಾರು ಅಬ್ಬರಿಸುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿತ್ತು.
Advertisement
ಮುಂಗಾರು ಮಾರುತಗಳು ದುರ್ಬಲಗೊಂಡ ಕಾರಣ ಮಳೆ ವಿಳಂಬವಾಗಿದೆ. ಹವಾಮಾನ ಇಲಾಖೆ ಇದೀಗ ಮುನ್ಸೂಚನೆ ಕೊಟ್ಟಿದ್ದು ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಕೆಲವೆಡೆ ವರ್ಷಧಾರೆ ಆಗಬಹುದು. ಕಾರ್ಮೋಡ ಮುಸುಕಿದ ವಾತಾವರಣ ಇದೆ. ಉಡುಪಿ ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ಜುಲೈ ತಿಂಗಳಲ್ಲಿ ಅಬ್ಬರದ ಮುಂಗಾರುಮಳೆ ಕರಾವಳಿ ಜಿಲ್ಲೆಗಳಲ್ಲಿ ಸುರಿಯಬಹುದು ಎಂದು ಹವಾಮಾನ ಇಲಾಖೆ ಲೆಕ್ಕಾಚಾರ ಹಾಕಿದೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಶೀಘ್ರದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದೆ: ಗೋವಿಂದ ಕಾರಜೋಳ
Advertisement
Advertisement
ಸಮುದ್ರತೀರಕ್ಕೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಪ್ರವಾಸಿಗರ್ಯಾರೂ ಕಡಲಿಗೆ ತಿಳಿಯಬಾರದು ಎಂಬ ಸೂಚನೆ ಕೊಡಲಾಗಿದೆ. ಕುಂದಾಪುರ ಮತ್ತು ಬೈಂದೂರ ತಾಲೂಕಿನಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆ ಬಿದ್ದಿದ್ದು ಈ ಭಾಗದ ಕೆಲ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆಸಾನಿ ಚಂಡಮಾರುತ ಸಂದರ್ಭ ಉಳುಮೆ ಮತ್ತು ಬಿತ್ತನೆ ಮಾಡಿದ್ದ ರೈತರು ಕೆಲ ಗದ್ದೆಗಳಲ್ಲಿ ನಾಟಿ ಮಾಡುತ್ತಿದ್ದಾರೆ.