ಮೈಸೂರು: ಬಿಸಿಲ ಧಗೆಯಿಂದ ಬೆಂದು ಹೋಗಿರೋ ಕರುನಾಡಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಇವತ್ತು ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಪ್ರತ್ಯಕ್ಷಗೊಂಡು ತಂಪೆರೆದಿದ್ದಾನೆ.
ಮೈಸೂರಿನ ಎಚ್.ಡಿ.ಕೋಟೆಯ ಅರಣ್ಯ ಭಾಗ ಸೇರಿದಂತೆ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಸಂಜೆ 3 ಗಂಟೆಗೆ ಆರಂಭವಾದ ಮಳೆ ಅರ್ಧಗಂಟೆ ಸುರಿದಿದೆ.
Advertisement
ತುಮಕೂರು ಜಿಲ್ಲೆಯ ಮಧುಗಿರಿಯಲ್ಲೂ ಮಳೆಯಾಗಿದೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಭಾನುವಾರ ರಾಮನಗರದ ಸುತ್ತಮುತ್ತಾ ತುಂತುರು ಮಳೆಯಾಗಿತ್ತು.
Advertisement
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಮೂರು ದಿನಗಳ ಕಾಲ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೂಡ ನೀಡಿತ್ತು. ಮಳೆ ಬಿದ್ದ ಕಾರಣ ಜನ ಈಗ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ.
Advertisement