ಬೆಂಗಳೂರು: ಬಿಸಿಲಿನಿಂದ ಬಸವಳಿದಿದ್ದ ಸಿಲಿಕಾನ್ ಸಿಟಿ ಜನತೆಗೆ ವರುಣ ತಂಪೆರೆದಿದ್ದಾನೆ. ಬೆಂಗಳೂರಿನ ಹಲವೆಡೆ ಮಳೆಯ ಸಿಂಚನವಾಗಿದೆ.
ಲಗ್ಗೆರೆಯಲ್ಲಿ ಡಿಕೆ ಸುರೇಶ್ ಪರ ಪ್ರಚಾರ ಸಭೆಗೆ ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಮಾತನಾಡುವಾಗ ಮಳೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ತಾವು ಕುಳಿತ್ತಿದ್ದ ಚೇರ್ ಗಳನ್ನು ಮೇಲಕ್ಕೆ ಎತ್ತಿ ಮಳೆಯಿಂದ ಆಶ್ರಯ ಪಡೆದರು.
Advertisement
ಮಳೆ ಜೋರಾದ ಹಿನ್ನೆಲೆಯಲ್ಲಿ ಪರಮೇಶ್ವರ್ ಅರ್ಧದಲ್ಲೇ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಲಗ್ಗೆರೆ ಮಾತ್ರವಲ್ಲದೆ, ಯಶವಂತಪುರ ಹಾಗೂ ಇನ್ನೂ ಹಲವೆಡೆ ತುಂತುರು ಮಳೆಸುರಿದಿದೆ.
Advertisement