ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗ್ತಿದೆ. ಮೈಸೂರಿನಲ್ಲಿ ಮಂಗಳವಾರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಕತ್ತಲಲ್ಲಿ ಕಳೆದರು. ಇನ್ನು, ಚಾಮುಂಡಿಬೆಟ್ಟದ ಮೆಟ್ಟಲುಗಳ ಮೇಲೆ ಹರಿಯುತ್ತಿದ್ದ ನೀರು ಮಿನಿ ಜಲಪಾತದಂತೆ ಕಂಗೊಳಿಸುತ್ತಿತ್ತು. ಮಳೆಯಲ್ಲಿಯೂ ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದತ್ತ ಆಕರ್ಷಿಸಿತು. ಇತ್ತ ಹಾಸನದ ಅರಸೀಕೆರೆಯಲ್ಲಿ ಸಿಡಿಲು ಬಡಿದು 46 ವರ್ಷದ ಹುಚ್ಚಪ್ಪ ಎಂಬವರು ಮೃತಪಟ್ಟಿದ್ದಾರೆ. ಇತ್ತ ಬೆಳಗಾವಿಯಲ್ಲಿ ಸಂಜೆ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿತ್ತು.
Advertisement
ಕೆರೆ ಹಾವನ್ನು ಅರ್ಧ ನುಂಗಿ ನದಿದಡದಲ್ಲೇ ಬಿದ್ದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನ ರಕ್ಷಿಸಿ ಕಾಡಿಗೆ ಬಿಟ್ಟಿರೋ ಘಟನೆ ಚಿಕ್ಕಮಗಳೂರಿನ ಮಹಲ್‍ಗೋಡು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯ ಪಡೆದು ಕಾಳಿಂಗನನ್ನ ಉರಗ ತಜ್ಞ ಹರೀಂದ್ರ ಕಾಳಿಂಗನನ್ನ ಕಾಡಿಗೆ ಬಿಟ್ಟಿದ್ದಾರೆ. ಕಳೆದ 2 ತಿಂಗಳಲ್ಲಿ ಕಾಫಿನಾಡಿನ ವಿವಿಧ ಭಾಗದಲ್ಲಿ 10 ಕ್ಕೂ ಹೆಚ್ಚು ಬೃಹತ್ ಕಾಳಿಂಗ ಸರ್ಪಗಳನ್ನ ಸ್ಥಳಿಯ ಉರಗ ತಜ್ಞರು ಅರಣ್ಯ ಇಲಾಖೆಯ ನೇತೃತ್ವದಲ್ಲಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.
Advertisement