ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಕೊನೆಗೂ ಮಳೆರಾಯನ ದರ್ಶನವಾಗಿದ್ದು, ಜನರ ಮೊಗದಲ್ಲಿ ಕೊಂಚ ಸಂತಸ ಮೂಡಿದೆ.
ಅನೇಕ ದಿನಗಳಿಂದ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗುತ್ತಿತ್ತು. ಆದರೆ ರಾಯಚೂರಿನಲ್ಲಿ ಮಳೆಯಾಗದೇ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದರು. ಕಳೆದ ದಿನ ರಾಯಚೂರಿನಲ್ಲಿ ಮಳೆಯಾಗಿದ್ದು, ಬಿಸಿಲಿನಿಂದ ಬೆಂದಿದ್ದ ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಿರುಗಾಳಿ ಸಹಿತ ಸುರಿದ ಮಳೆಗೆ ರಾಯಚೂರು ತಾಲೂಕಿನಲ್ಲಿ ಗುಡಿಸಲುಗಳು ಬಿದ್ದಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
Advertisement
Advertisement
ಕಡಗಂದೊಡ್ಡಿ ಗ್ರಾಮದಲ್ಲಿ ಟಿನ್‍ಹಾರಿ ಗೋಡೆಗಳು ಬಿದ್ದು ಎರಡು ಗುಡಿಸಲು ಸಂಪೂರ್ಣ ಹಾಳಾಗಿವೆ. ಪದ್ಮಮ್ಮ ಮತ್ತು ಅಂಜಿನಮ್ಮ ಎಂಬವರಿಗೆ ಸೇರಿದ ಗುಡಿಸಲುಗಳು ಬಿದ್ದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
Advertisement
ಗ್ರಾಮದಲ್ಲಿ ಬಿರುಗಾಳಿಗೆ 6 ವಿದ್ಯುತ್ ಕಂಬಗಳು ನೆಲಕ್ಕುರಳಿದ್ದು, ಮಧ್ಯರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.