-ಮಂಗಳೂರು- ಬೆಂಗಳೂರು ರೈಲು ಯಾನ ಆರಂಭ
ಮಡಿಕೇರಿ: ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಇಳಿಮುಖವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ರಕ್ಷಣಾ ಕಾರ್ಯ ಅಂತಿಮ ಹಂತ ತಲುಪುತ್ತಿದ್ದು, ಇದೂವರೆಗೆ ಒಟ್ಟು 4,320 ಮಂದಿಯನ್ನು ರಕ್ಷಿಸಿ ಜಿಲ್ಲೆಯ 41 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಸುಮಾರು 50 ಮಂದಿ ನಾಪತ್ತೆಯಾಗಿರುವ ಅಥವಾ ಪ್ರವಾಹದಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ. ಭಾರತೀಯ ಸೇನೆ ಮತ್ತು ನೌಕಾಪಡೆ ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ ಯಾರಾದರೂ ಪ್ರವಾಹದಲ್ಲಿ ಸಿಲುಕಿದ್ದಾರಾ? ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಡ್ರೋನ್ ಕ್ಯಾಮೆರಾ ಬಳಸಿ ನಾಪತ್ತೆಯಾದವರ ಶೋಧ ನಡೆಸಲಾಗುತ್ತಿದೆ.
Advertisement
Advertisement
ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಡುಗು ಜಿಲ್ಲೆಯಲ್ಲಿ ಹಲವು ಪ್ರವಾಸಿಗರು ರೆಸಾರ್ಟ್ ಮತ್ತು ಹೋಟೆಲ್‍ಗಳಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ, ಆಗಸ್ಟ್ 31ರ ವರೆಗೆ ಎಲ್ಲಾ ಹೋಟೆಲ್‍ಗಳ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ. ಪ್ರವಾಸಿಗರು ಹೋಟೆಲ್, ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಆಗಸ್ಟ್ 31ರ ವರೆಗೆ ಮಾಡಿದ್ದ ಬುಕ್ಕಿಂಗ್ ಗಳನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
Advertisement
ಇತ್ತ ಮಂಗಳೂರು-ಬೆಂಗಳೂರು ರೈಲು ಯಾನ ಮತ್ತೆ ಆರಂಭವಾಗಿದೆ. ಇದರಿಂದ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ಉಸಿರು ಬಿಡುವಂತಾಗಿದೆ. ಈ ನಡುವೆ ಪ್ರವಾಹದಿಂದ ತತ್ತರಿಸಿದ ಕೇರಳದ ರೈಲು ಹಳಿಗಳು ಶೇ.90ರಷ್ಟು ದುರಸ್ತಿಗೊಂಡಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv